ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಗಂಡ ಸತ್ತ ನಂತರದಲ್ಲಿ ಮಹಿಳೆ ಹೋರಾಡಲೇಬೇಕು’ : ಶಿಲ್ಪಾ ಶೆಟ್ಟಿ

ನಟಿ ಶಿಲ್ಪಾಶೆಟ್ಟಿ ಗಂಡ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಕ್ಕಿ ಬಿದ್ದ ನಂತರದಲ್ಲಿ ಶಿಲ್ಪಾ ವಿಚಲಿತಗೊಂಡಿದ್ದರು. ಸದ್ಯ ಶಿಲ್ಪಾ ಶೆಟ್ಟಿ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ‘ಸೂಪರ್ ಡ್ಯಾನ್ಸರ್ 4’ ರಿಯಾಲಿಟಿ ಶೋ ಸೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಶೋನ ಪ್ರೋಮೋವನ್ನು ಸೋನಿ ವಾಹಿನಿ ಹಂಚಿಕೊಂಡಿದ್ದು, ಅದರಲ್ಲಿ ಶಿಲ್ಪಾ ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದಾರೆ. ರಿಯಾಲಿಟಿ ಶೋನಲ್ಲಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ಕಥೆ ಆಧರಿಸಿ ಬಾಲಕಿಯೊಬ್ಬಳು ನೃತ್ಯ ಪ್ರದರ್ಶನ ಮಾಡಿದ್ದರು. ಇದನ್ನು ನೋಡಿದ ನಂತರದಲ್ಲಿ ಶಿಲ್ಪಾ ಶೆಟ್ಟಿ ಆವೇಶಕ್ಕೆ ಒಳಗಾಗಿದ್ದಾರೆ.

‘ನಾನು ಪ್ರತಿ ಬಾರಿ ಝಾನ್ಸಿ ರಾಣಿಯ ಬಗ್ಗೆ ಕೇಳಿದಾಗ ಸಾಕಷ್ಟು ವಿಚಾರಗಳು ತಲೆಯಲ್ಲಿ ಬರುತ್ತವೆ. ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಗಂಡ ಸತ್ತ ನಂತರದಲ್ಲಿ, ತಮ್ಮ ಅಸ್ತಿತ್ವಕ್ಕಾಗಿ ಮಹಿಳೆಯರು ಹೋರಾಡಬೇಕಾದ ಪರಿಸ್ಥಿತಿ ಇದೆ. ಎಲ್ಲವನ್ನೂ ಧೈರ್ಯದಿಂದ ಎದುರಿಸಿದ ಸಾಕಷ್ಟು ಮಹಿಳೆಯರು ಭಾರತದ ಇತಿಹಾಸದಲ್ಲಿ ಸಿಗುತ್ತಾರೆ. ಅಂಥ ರಾಷ್ಟ್ರದಿಂದ ನಾವು ಬಂದಿದ್ದೇವೆ ಎನ್ನುವ ಹೆಮ್ಮೆ ನನಗಿದೆ. ಯಾವುದೇ ಸನ್ನಿವೇಶವಿದ್ದರೂ, ನಾವು ಮಹಿಳೆಯರು ಹೋರಾಡಬಲ್ಲ ಶಕ್ತಿಯನ್ನು ಹೊಂದಿದ್ದೇವೆ’ ಎಂದಿದ್ದಾರೆ.

ರಾಜ್ ಕುಂದ್ರಾ ಕೇಸ್ ದಿನದಿಂದ ದಿನಕ್ಕೆ ಜಟಿಲ ಆಗುತ್ತಿದೆ. ಶಿಲ್ಪಾ ಶೆಟ್ಟಿ ಕೂಡ ಹಲವು ಬಾರಿ ಪೊಲೀಸರ ತನಿಖೆಗೆ ಒಳಪಡಬೇಕಾಗುತ್ತಿದೆ.

Edited By : Nirmala Aralikatti
PublicNext

PublicNext

20/08/2021 09:35 pm

Cinque Terre

85.54 K

Cinque Terre

8