ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದ್ದು, ಈ ಕುರಿತು ಸ್ವತಃ ನಟಿ ಕಂಗನಾ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ನಟಿ ಕಂಗನಾ ಇನ್‌ಸ್ಟಾಗ್ರಾಮ್‌ನಲ್ಲಿ, "ಕಳೆದ ರಾತ್ರಿ ಇನ್‍ಸ್ಟಾಗ್ರಾಂ ಹ್ಯಾಕ್ ಆಗಿರುವ ಕುರಿತ ಸಂದೇಶ ಬಂತು. ಚೀನಾದಿಂದ ನನ್ನ ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನಿಸಲಾಗುತ್ತಿದೆ. ಆದರೆ ಈ ಅಲರ್ಟ್ ಮೆಸೇಜ್ ಕೆಲವೇ ಕ್ಷಣಗಳಲ್ಲಿ ಮಾಯವಾಯ್ತು. ಜೊತೆಗೆ ಇಂದು ತಾಲಿಬಾನಿಗಳ ಬಗ್ಗೆ ಹಾಕಲಾಗಿದ್ದ ಇನ್‍ಸ್ಟಾ ಸ್ಟೋರಿ ಸಹ ಕಾಣಿಸುತ್ತಿಲ್ಲ. ನನ್ನ ಖಾತೆ ಡಿಸೇಬಲ್ ಆಗಿದೆ. ನಾನು ಇನ್‍ಸ್ಟಾಗ್ರಾಂಗೆ ಸಂಬಂಧಿಸಿದವರಿಗೆ ಫೋನ್ ಮಾಡಿ ಖಾತೆ ಹ್ಯಾಕ್ ಆಗಿರುವ ವಿಷಯ ತಿಳಿಸಿದೆ. ಇನ್‍ಸ್ಟಾ ಸ್ಟೋರಿಯಲ್ಲಿ ಬರೆಯಲು ಹೋದ್ರೆ ಲಾಗ್ ಔಟ್ ಆಗ್ತಿದೆ. ಇದೇ ರೀತಿ ಹಲವು ಬಾರಿ ಆಗಿದೆ. ಈ ಸ್ಟೋರಿಯನ್ನು ಸೋದರಿಯ ಮೊಬೈಲ್ ನಿಂದ ಅಪ್‌ಡೇಟ್ ಮಾಡುತ್ತಿದ್ದೇನೆ. ಆಕೆಯ ಫೋನ್‌ನಲ್ಲಿಯೂ ನನ್ನ ಖಾತೆ ಲಾಗಿನ್ ಇದೆ. ಇದೊಂದು ಅಂತರರಾಷ್ಟ್ರೀಯ ಷಡ್ಯಂತ್ರವಾಗಿದೆ" ಎಂದು ಆರೋಪಿಸಿದ್ದಾರೆ.
PublicNext
18/08/2021 10:40 pm