ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಸ್ವತಃ ಸುದೀಪ್ ಅವರೇ ರಾಷ್ಟ್ರಗೀತೆ ಹಾಡುವ ಮೂಲಕ ಗಮನ ಸೆಳೆದಿದ್ದರು. ತಮ್ಮದೇ ಧ್ವನಿಯಲ್ಲಿ ಜನಗಣಮನ ಹಾಡಿ ಸ್ವಾತಂತ್ರ್ಯ ದಿನಾಚರಣೆಗೆ ಬಹಳ ವಿಶೇಷವಾಗಿ ಶುಭಾಶಯ ತಿಳಿಸಿದರು. ಸುದೀಪ್ ಅವರ ಅನೇಕ ಅಭಿಮಾನಿಗಳು ಈ ವಿಡಿಯೋ ಶೇರ್ ಮಾಡಿದ್ದರು. ಆದರೆ, ಸುದೀಪ್ ಅವರಿಗೆ ರಾಷ್ಟ್ರಗೀತೆ ಬಗ್ಗೆ ಇರಬೇಕಾದ ಕಾಳಜಿ ಬಗ್ಗೆ ಯಾರೂ ಗಮನಿಸಿಲಿಲ್ಲ ಎಂಬ ಟೀಕೆ ವ್ಯಕ್ತವಾಯಿತು. ಈ ಕುರಿತು ಅಭಿಮಾನಿಯೊಬ್ಬ ಸುದೀಪ್ ಅವರ ಹಾಡಿದ ರಾಷ್ಟ್ರಗೀತೆಯಲ್ಲಿ ತಪ್ಪೊಂದು ಆಗಿದೆ ಎಂದು ಎತ್ತಿ ತೋರಿಸಿದರು. ಅದಕ್ಕೆ ಸುದೀಪ್ ಸಹ ಪ್ರತಿಕ್ರಿಯಿಸಿದ್ದು, ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ.
ಭಾರತದ ರಾಷ್ಟ್ರಗೀತೆಯನ್ನು 48-52 ಸೆಕೆಂಡ್ ಒಳಗೆ ಹಾಡಬೇಕು. ಆದರೆ ಸುದೀಪ್ ಅವರು ಹಾಡಿರುವ ರಾಷ್ಟ್ರಗೀತೆಗೆ ಅವರು ತೆಗೆದುಕೊಂಡ ಸಮಯ 63-65 ಸೆಕೆಂಡ್. ಹಾಗಾಗಿ, ನೆಟ್ಟಿಗನೊಬ್ಬ ಈ ಬಗ್ಗೆ ಟ್ವೀಟ್ ಮಾಡಿ 'ಸುದೀಪ್ ಸರ್ ರಾಷ್ಟ್ರಗೀತೆ ಬಗ್ಗೆ ನಿಮಗೆ ಕಾಮನ್‌ಸೆನ್ಸ್ ಇಲ್ವಾ?' ಎಂದು ಕೇಳಿದ್ದಾನೆ. ''ಕರೆಕ್ಟ್ ಆಗಿ ರಾಷ್ಟ್ರಗೀತೆ ಹಾಡಿ ಸರ್. ನಿಮ್ಮನ್ನು ಬಹಳಷ್ಟು ಜನ ಫಾಲೋ ಮಾಡ್ತಾರೆ. ನೀವು ಟಾಪ್ ಆಗಿರಬಹುದು. ಆದರೆ 48-52 ಸೆಕೆಂಡ್ ಅವಧಿಯಲ್ಲಿ ರಾಷ್ಟ್ರಗೀತೆ ಹಾಡಬೇಕು ಎನ್ನುವ ಕಾಮನ್ ಸೆನ್ಸ್ ಕೂಡ ಇಲ್ವಾ?'' ಎಂದು ಪ್ರಶ್ನಿಸಿದ್ದಾನೆ.
ಆ ನೆಟ್ಟಿಗನ ಟೀಕೆಗೆ ಸುದೀಪ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ''ಒರಟಾಗಿದೆ, (ಕಾಮೆಂಟ್) ಆದರೂ ಒಪ್ಪಿಕೊಳ್ಳುತ್ತೇನೆ. ನನ್ನ ದೇಶದ ಮೇಲಿನ ಪ್ರೀತಿಯಿಂದಾಗಿ ನನಗೆ ಅನಿಸಿದ್ದನ್ನು ಮಾಡಿದ್ದೇನೆ. ಜೈ ಹಿಂದ್'' ಎಂದು ಹೇಳಿದ್ದಾರೆ.
PublicNext
16/08/2021 03:56 pm