ಮಂಗಳೂರು: ದೇಶಾದ್ಯಂತ ನಾವು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿದ ನೇತಾಜಿ ಸುಭಾಷ್ ಚಂದ್ರ ಭೋಸ್ ನೆನಪಿಗಾಗಿ 'ಮಂಗಳೂರಿನ ಸೋಲ್ಸ್ ರಿದಂ' ಎಂಬ ಯುವಕರ ತಂಡವೊಂದು ಆಜಾದಿ ಎಂಬ ಲಿರಿಕಲ್ ವೀಡಿಯೋವನ್ನು ರಿಲೀಸ್ ಮಾಡಿದೆ. ಈ ಹಾಡನ್ನು 'ಕೆಜಿಎಫ್' ಖ್ಯಾತಿಯ ಗಾಯಕಿ ಐರಾ ಉಡುಪಿಯವರ ಏರು ಕಂಠದಲ್ಲಿ ಸೊಗಸಾಗಿ ಹಾಡಿದ್ದಾರೆ.
ಸುಭಾಷ್ ಚಂದ್ರ ಬೋಸ್ ಅವರ ಹಳೆಯ ಫೋಟೋಗಳನ್ನೇ ಬಳಸಿ ಈ ಲಿರಿಕಲ್ ವೀಡಿಯೋವನ್ನು ವಿಶಿಷ್ಟವಾಗಿ ಸಂಯೋಜನೆ ಮಾಡಲಾಗಿದೆ. ನಿರ್ದೇಶಕ ಸಿ.ಎಸ್.ಜಯಪ್ರಕಾಶ್ ಅವರು ಸಾಕಷ್ಟು ಪರಿಶ್ರಮ ವಹಿಸಿ, ಸಾಕಷ್ಟು ಪೂರ್ವ ತಯಾರಿಯಿಂದ ಈ ಲಿರಿಕಲ್ ವೀಡಿಯೋ ಸಂಯೋಜನೆ ಮಾಡಿದ್ದಾರೆ. ಯುವ ಸಾಹಿತಿ ವಿಜೇಶ್ ದೇವಾಡಿಗ ಮಂಗಳಾದೇವಿ ಅವರ ಸೊಗಸಾಗಿ ಸಾಹಿತ್ಯ ರಚಿಸಿದ್ದು, ಸಂದೇಶ್ ಬಾಬು ಅವರ ಸಂಗೀತ ಸಂಯೋಜನೆ ಇದೆ.
74 ನೇ ಸ್ವಾತಂತ್ರ್ಯ ಸಂದರ್ಭದಲ್ಲಿ ಇದೇ ಸೋಲ್ಸ್ ರಿದಂ ತಂಡ ಸ್ವಾಮಿ ವಿವೇಕಾನಂದರ ಬಗ್ಗೆ ಲಿರಿಕಲ್ ವೀಡಿಯೋ ಮಾಡಿತ್ತು. ಅದಕ್ಕೂ ಸಾಕಷ್ಟು ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆಯ ಅಮೃತ ಮಹೋತ್ಸವಕ್ಕೆ ಸುಭಾಷ್ ಚಂದ್ರ ಬೋಸ್ ಬಗ್ಗೆ ಹಾಡು ಸಂಯೋಜನೆ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಬಿಂಬಿಸುವ ಹಿನ್ನೆಲೆಯಿಂದ ಇಡೀ ಹಾಡನ್ನು ಏರುಸ್ಥಾಯಿಯಲ್ಲಿ ಸಂಯೋಜನೆ ಮಾಡಲಾಗಿದ್ದು, ಐರಾ ಏರು ಕಂಠದಲ್ಲಿ ಲೀಲಾಜಾಲವಾಗಿ ಹಾಡಿದ್ದಾರೆ.
PublicNext
16/08/2021 11:36 am