ಮಂಗಳೂರು:ಲವ್ ಯೂ ರಚ್ಚು ಸಿನೆಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ದುರಂತ. ನಾವು ಈ ಬಗ್ಗೆ ಈ ಮುಂಚೆನೇ ಚರ್ಚಿಸಿದ್ದೇವು. ಮೊದಲು ಸುರಕ್ಷತೆ. ನಂತರ ರಿಸ್ಕ್ ತೆಗೆದುಕೊಳ್ಳಬೇಕು ಎಂದ ಅವರು, ನಾನು ಇಂತಹ ಅವಘಡಗಳನ್ನು ನನ್ನ ಚಿತ್ರದ ಶೂಟಿಂಗ್ ವೇಳೆ ನೋಡಿದ್ದೀನಿ. ಇನ್ಸುರೆನ್ಸ್ ಮಾಡೋಣ ಅಂದ್ರೆ ಅವ್ರು ಬರಲ್ಲ. ಕೇಂದ್ರ ಸರ್ಕಾರ ಕೂಡಾ ಸಹಾಯ ಮಾಡಲ್ಲ. ತೆರಿಗೆ ಮಾತ್ರ ಸಂಗ್ರಹ ಮಾಡ್ತದೆ ಎಂದರು.
ಇನ್ನು ಸ್ಟಂಟ್ ಮಾಸ್ಟರ್ ಗಳನ್ನು ನೋಡಿದ್ರೆ ಕಣ್ಣಲ್ಲಿ ನೀರಲ್ಲ, ರಕ್ತ ಬರ್ತದೆ ಅಂದ್ರು. ಹೀಗಾಗಿ ಅವ್ರಿಗೆ ರಕ್ಷಣೆ ಕೊಡುವ ವಿಚಾರದಲ್ಲಿ ನಾವು ಕೆಲಸ ಮಾಡಬೇಕು. ಸರ್ಕಾರ ಕೂಡಾ ಮನಸ್ಸು ಮಾಡಬೇಕು ಎಂದರು.
PublicNext
10/08/2021 09:49 pm