ಇದೀಗ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ದಂಪತಿಯ ಎರಡನೇ ಪುತ್ರನ ಹೆಸರು ಬಹಿರಂಗವಾಗಿದೆ.ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಖಾನ್ ದಂಪತಿಯ ಮೊದಲ ಪುತ್ರನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಡಲಾಗಿದೆ. ಇದೀಗ ಎರಡನೇ ಪುತ್ರನಿಗೆ ಜೆಹಾಂಗೀರ್ ಎಂದು ಹೆಸರಿಡಲಾಗಿದೆ.
ಕರೀನಾ ಕಪೂರ್ ಖಾನ್-ಸೈಫ್ ಅಲಿ ಖಾನ್ ದಂಪತಿಯ ಎರಡನೇ ಪುತ್ರನ ಹೆಸರು 'ಜೆಹ್' ಎಂದು ಕರೀನಾ ಕಪೂರ್ ಖಾನ್ ತಂದೆ ರಣಧೀರ್ ಕಪೂರ್ ಮಾಧ್ಯಮಗಳಿಗೆ ತಿಳಿಸಿದ್ದರು. ಆದ್ರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ದ್ವಿತೀಯ ಪುತ್ರನ ಹೆಸರು 'ಜೆಹಾಂಗೀರ್'!
ತಮ್ಮ ಪುತ್ರನಿಗೆ 'ಜೆಹಾಂಗೀರ್' ಎಂದು ಹೆಸರಿಟ್ಟಿರುವ ಬಗ್ಗೆ ಸೈಫ್ ಅಲಿ ಖಾನ್ ಆಗಲಿ ಕರೀನಾ ಕಪೂರ್ ಖಾನ್ ಆಗಲಿ ತಿಳಿಸಿಲ್ಲ. ಆದರೆ, ಕರೀನಾ ಕಪೂರ್ ಖಾನ್ ಬರೆದಿರುವ 'ಪ್ರೆಗ್ನೆನ್ಸಿ ಬೈಬಲ್' ಪುಸ್ತಕದಲ್ಲಿ ಪುತ್ರನ ಹೆಸರು 'ಜೆಹಾಂಗೀರ್' ಅಂತ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
PublicNext
10/08/2021 02:30 pm