ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಚ್ ಪನ್ ಕಾ ಪ್ಯಾರ್ ಹಾಡು ಸಖತ್ ವೈರಲ್ ಆಗಿದೆ. ಸಹ್ ದೇವ್ ದಿರ್ಡೋ ಎಂಬ ಬಾಲಕ ಶಾಲೆಯಲ್ಲಿ ಹಾಡಿದ ಬಚ್ ಪನ್ ಕಾ ಪ್ಯಾರ್ ಹಾಡು ಇನ್ ಸ್ಟಾಗ್ರಾಂ ಸೇರಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡಿಗೆ ನಟಿ ಅನುಷ್ಕಾ ಶೆಟ್ಟಿ ಮರುಳಾಗಿದ್ದಾರೆ.
ರಾತ್ರಿ ಶಾಂತಿಯಿಂದ ಮಲಗೋಕೆ ಹೋದ್ರೂ ಈ ಹಾಡೇ ಕಾಡುತ್ತಿದೆ ಎಂದಿದ್ದಾರೆ ಕೊಹ್ಲಿ ಪತ್ನಿ. ಈ ಹಾಡು ಒರಿಜಿನಲ್ ಆಗಿ ಹಾಡಿದ್ದು ಕಮಲೇಶ್ ಬರೋಟ್. ಬಾಲಕ ಈ ಹಾಡನ್ನು ಶಾಲೆಯಲ್ಲಿ ಶಿಕ್ಷಕರು ಮತ್ತು ಸಹಪಾಠಿಗಳಿಗಾಗಿ ಹಾಡಿ ಫೇಮಸ್ ಆಗಿದ್ದಾನೆ. ಸಹದೇವ್ ನನ್ನು ಇತ್ತೀಚೆಗೆ ಛತ್ತೀಸ್ ಗಡ್ ಸಿಎಂ ಕೂಡಾ ಗೌರವಿಸಿದ್ದಾರೆ.
PublicNext
03/08/2021 04:42 pm