''ಹೀರೋ'' ಚಿತ್ರದ ಚಿತ್ರೀಕರಣದ ವೇಳೆ ನಟ ರಿಷಬ್ ಶೆಟ್ಟಿ ಭಾರೀ ಅನಾಹುತದಿಂದ ಪಾರಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೇ ಶುಕ್ರವಾರ (ಮಾ.5)ರಂದು ಹೀರೋ ಸಿನಿಮಾ ರಿಲೀಸ್ ಆಗಲಿದೆ. ರಾಜ್ಯ ಸೇರಿದಂತೆ ಇತರೆ ರಾಜ್ಯಗಳಲ್ಲೂ ಹೀರೋ ಅಬ್ಬರಿಸಲಿದ್ದಾನೆ. ಹೀಗಾಗಿ ಚಿತ್ರತಂಡವು ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ನಿತ್ಯ ಒಂದೊಂದು ಹೊಸ ವಿಡಿಯೋ ಹಾಗೂ ತಂತ್ರಗಳೊಂದಿಗೆ ಸಮಾಜಿಕ ಜಾಲತಾಣದಲ್ಲಿ ಜನರನ್ನು ತಲುಪ ಪ್ರಯತ್ನ ಮಾಡಲಾಗುತ್ತಿದೆ.
ಸಿನಿಮಾ ರಿಲೀಸ್ಗೆ ನಾಲ್ಕು ದಿನಗಳು ಬಾಕಿ ಉಳಿದಿರುವಾಗಲೇ ಹೀರೋ ಸಿನಿಮಾಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ.
PublicNext
01/03/2021 01:14 pm