ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಒಂಟಿ ಮನೆಗೆ ಎಂಟ್ರಿ : ಬಿಗ್ ಬಾಸ್ ಸೀಸನ್ 8 ಸ್ವಾಮಿ

ಬೆಂಗಳೂರು: ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿ ಇಂದಿನಿಂದ ಗ್ರ್ಯಾಂಡ್ ಒಪನಿಂಗ್ ಪಡೆಯಲಿದೆ. ಒಂಟಿ ಮನೆಗೆ ಬರುವ ಸ್ಪರ್ಧಿಗಳು ಫೈನಲ್ ಆಗಿದ್ದಾರೆ. ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿಗೆ ಸ್ಪರ್ಧಿಗಳು ಫೈನಲ್ ಆಗಿದ್ದಾರೆ. ಒಂಟಿ ಮನೆಯೊಳಗೆ ತಮ್ಮ ಆಟವನ್ನು ಆಡಲು ಹೋಗುತ್ತಿರುವವರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ.

ಸ್ಯಾಂಡಲ್ ವುಡ್ ಸ್ಟಾರ್ ನಟಿಯರು ಸೆಲೆಟ್ರಿಗಳು ಹಾಗೂ ಇನ್ನಿತರ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಲವರ ಹೆಸರು ಕೇಳಿಬರುತ್ತಿತ್ತು. ಆದರೆ ಇಂದು ಕೇಳಿ ಬಂದಿರುವ ಹೆಸರುಗಳು ದೊಡ್ಡ ಮನೆಯಲ್ಲಿ ಆಟ ಆಡಲು ಬರುತ್ತಿದ್ದಾರೆ ಎನ್ನುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ನಟಿ ನಿಧಿ ಸುಬ್ಬಯ್ಯ, ಹಿರಿಯ ನಟ ಶಂಕರ್ ಅಶ್ವಥ್, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ, ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್, ಹಾಸ್ಯ ಕಲಾವಿದ ಮಂಜುಪಾವಗಡ, ಪಟ್ಟಗೌರಿ ಖ್ಯಾತಿಯ ಚಂದ್ರಕಲಾ ಮೋಹನ್, ಹಾಡು ಕರ್ನಾಟಕ ಫೇಮ್ ವಿಶ್ವನಾಥ್ ಹಾವೇರಿ, ನಾಯಕ ಸುನಿಲ್ ರಾವ್ ಮತ್ತು ಓರ್ವ ಬೈಕ್ ರೈಡರ್ ಸೇರಿದಂತೆ ಹಲವು ಕಿರುತೆರೆಯ ನಟನಟಿಯರು ಹಾಗೂ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ದೊಡ್ಡ ಮನೆಯಲ್ಲಿ ಬಂಧಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಒಂಟಿಮನೆಗೆ ಯಾರು ಹೋಗುತ್ತಾರೆ..? ಸುದೀಪ್ ಅವರನ್ನು ಯಾವೆಲ್ಲ ಹೊಸ ಗೇಟಪ್ ಗಳಲ್ಲಿ ನೋಡಬಹುದು ಎಂದು ಚರ್ಚೆ ಮಾಡುತ್ತಿದ್ದರು. ಈ ಎಲ್ಲಾ ವಿಚಾರಗಳಿಗೆ ಇಂದು ತೆರೆಬಿಳಲಿದೆ.ಇಂದು ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಬಿಗ್ ಬಾಸ್ ಕಾರ್ಯಕ್ರಮದ ಗ್ರ್ಯಾಂಡ್ ಒಪನಿಂಗ್ ನಡೆಯಲಿದೆ .

Edited By : Nirmala Aralikatti
PublicNext

PublicNext

28/02/2021 09:55 am

Cinque Terre

37.67 K

Cinque Terre

0