ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಎಂಟನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ ದೊಡ್ಮನೆಗೆ ಎಂಟ್ರಿ ಕೊಡುವವರು ಯಾರು ಎಂಬ ಚರ್ಚೆ ಶುರುವಾಗಿದೆ. ಈ ಮಧ್ಯೆ ಕೆಲವರ ಹೆಸರು ಹರಿದಾಡುತ್ತಿದೆ.
ಮುಖ್ಯವಾಗಿ ಈ ಬಾರಿ ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್ ಗೌಡ , ಹಿರಿಯ ನಟಿ ವಿನಯಾ ಪ್ರಸಾದ್, ನಟ ಅನಿರುದ್ಧ್, ನಿರ್ದೇಶಕ ಡಿ. ಪಿ. ರಘುರಾಮ್, ಸರಿಗಮಪ ಖ್ಯಾತಿಯ ಹನುಮಂತು , ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ , ಅವಧೂತ ವಿನಯ್ ಗುರೂಜಿ , ನಟ ಸುನೀಲ್, ಆರ್.ಜೆ. ರಾಜೇಶ್, ನಟಿ ರೇಖಾ, ಅಗ್ನಿಸಾಕ್ಷಿ ಧಾರಾವಾಹಿಯ ನಟಿ ವೈಷ್ಣವಿ ಗೌಡ, ನಿರ್ದೇಶಕ ರಚಿ ಶ್ರೀವತ್ಸ ಸೇರಿದಂತೆ ಇನ್ನೂ ಹಲವರು ಈ ಬಾರಿಯ ಬಿಗ್ ಬಾಸ್ ಸೀಸನ್ 8ರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂದು ಮಾಹಿತಿಗಳು ಹರಿದಾಡುತ್ತಿದೆ.
PublicNext
27/02/2021 08:35 pm