ಗಾಂಧಿನಗರದಲ್ಲಿ ಸೊಂಟ ಬಳುಕಿಸಿ ಕಮಾಲ್ ಮಾಡಿದ್ದ ರಾಗಿಣಿ ದ್ವಿವೇದಿ ಡ್ರಗ್ಸ್ ಕೇಸ್ ನಲ್ಲಿ ಜೈಲು ಪಾಲಾಗಿದ್ದರು. 144 ದಿನ ಸೆರವಾಸದಿಂದ ಮುಕ್ತಿ ಪಡೆದು ಹೊರಬಂದ ರಾಗಿಣಿ, ಇತ್ತೀಚೆಗಷ್ಟೇ ತಾವು ಎದುರಿಸಿರೋ ಸಂಕಷ್ಟ ಹೇಳಿಕೊಂಡು ಇನ್ ಸ್ಟಾಗ್ರಾಮ್ ನಲ್ಲಿ ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ರು. ಜೊತೆಗೆ ಸದ್ಯದಲ್ಲಿಯೇ ಬಣ್ಮದ ಲೋಕಕ್ಕೆ ಮರಳೋ ಸೂಚನೆ ಕೂಡ ಕೊಟ್ಟಿದ್ರು. ಸದ್ಯ ಅಂದುಕೊಂಡಂತೆ ಮತ್ತೆ ಮೇಕಪ್ ಹಾಕೋದಕ್ಕೆ ರಾಗಿಣಿ ದ್ವಿವೇದಿ ರೆಡಿಯಾಗಿದ್ದಾರೆ.
ಸದ್ಯ ರಾಗಿಣಿ, ಏಪ್ರಿಲ್ ನಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಕಂಬ್ಯಾಕ್ ಮಾಡೋದು ಪಕ್ಕಾ ಆಗಿದೆ. ಕರ್ವ 3 ಸಿನಿಮಾ ಮೂಲಕ ಮೇಕಪ್ ಹಾಕಿ ಗಾಂಧಿನಗರಕ್ಕೆ ಮರಳಿ ಸೊಂಟ ಬಳುಕಿಸೋದು ನಿಶ್ಚಿತ. ವಿಶಾಲ್ ಶೇಖರ್ ಆ್ಯಕ್ಷನ್ ಕಟ್ ಹೇಳ್ತಿರೋ ಸಿನಿಮಾವನ್ನ ದಿಯಾ ನಿರ್ಮಾಪಕ ಕೃಷ್ಣ ಚೈತನ್ಯ ನಿರ್ಮಾಣ ಮಾಡ್ತಿರೋ ಚಿತ್ರದಲ್ಲಿ ರಾಗಿಣಿ ಆ್ಯಕ್ಟ್ ಮಾಡಲಿದ್ದಾರೆ.
ಈಗಾಗಲೇ ಮಾತುಕತೆ ಮಾಡಿರೋ ಚಿತ್ರತಂಡ ಡ್ರಗ್ಸ್ ಪ್ರಕರಣ ನಂತ್ರ ರಾಗಿಣಿಯನ್ನ ಗಾಂಧಿನಗರಕ್ಕೆ ಕರೆ ತರೋದಕ್ಕೆ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದೆ. ವಿಶೇಷ ಅಂದ್ರೆ ಕರ್ವ 3 ನಲ್ಲಿ ರಾಗಿಣಿ ಪಾತ್ರ ತುಂಬಾನೇ ಸ್ಪೆಷಲ್ ಆಗಿರುತ್ತಂತೆ.
PublicNext
26/02/2021 10:55 am