ಕಾಲೇಜ್ ಸ್ಟೋರಿ ಆಧಾರಿತ ಕಥಾ ಹಂದರ ಹೊಂದಿರುವ ಚಿತ್ರವೊಂದಕ್ಕೆ ಹಾಸ್ಯನಟ ಸಾಧುಕೋಕಿಲ ಮತ್ತೆ ನಿರ್ದೇಶನ ಜವಾಬ್ದಾರಿಗೆ ಕೈ ಹಾಕಿದ್ದಾರೆ. ಸಂಗೀತ ನಿರ್ದೇಶಕರಾಗಿ, ನಟರಾಗಿ ಖ್ಯಾತರಾಗಿರುವ ಸಾಧುಕೋಕಿಲ ನಿರ್ದೇಶಕಾರಾಗಿಯೂ ಈಗಾಗಲೇ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಪ್ರಸ್ತುತ ಅವರ ನಿರ್ದೇಶನದ ಹೊಸ ಸಿನಿಮಾ "ಜಾಲಿಲೈಫ್" ಮಾರ್ಚ್ ನಲ್ಲಿ ಸೆಟ್ಟೇರಲಿದೆ.
ಈ ಹಿಂದೆ "ತ್ರಿಕೋನ" ಚಿತ್ರ ನಿರ್ಮಿಸಿದ್ದ ರಾಜಶೇಖರ್ ಈ ಚಿತ್ರವನ್ನು ಪೊಲೀಸ್ ಪ್ರಕ್ಕಿ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ರಾಜಶೇಖರ್ ಅವರೇ ಬರೆದಿದ್ದು ತಮ್ಮ ಸಂಸ್ಥೆ ಮೂಲಕ ಈ ವರ್ಷ ನಾಲ್ಕು ಚಿತ್ರಗಳನ್ನು ನಿರ್ಮಿಸುವುದಾಗಿ ರಾಜಶೇಖರ್ ತಿಳಿಸಿದ್ದಾರೆ.
ಚಿತ್ರದ ತಾರಾಗಣದ ಆಯ್ಕೆಗಾಗಿ ಸುಚೀಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಸ್ವಚ್ಚ ಹಸಿರಿನ ಪರಿಸರದಲ್ಲಿ ವಿಭಿನ್ನವಾಗಿ ಆಡಿಶನ್ ನಡೆಸಲಾಗಿದೆ. ರಂಗಾಯಣ, ನೀನಾಸಂ ಹಾಗೂ ಟೆಂಟ್ ಸಿನಿಮಾ ಮೂಲಕ ಸುಮಾರು 500 ರಿಂದ 600 ಜನ ಕಲಾವಿದರು ಆಡಿಶನ್'ಗೆ ಆಗಮಿಸಿದ್ದು, 18 ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ಸಿನಿಮಾದಲ್ಲಿ ಐದು ಹಾಡುಗಳಿದ್ದು, ಸಾಧುಕೋಕಿಲ ಸಂಗೀತ ನೀಡುತ್ತಿದ್ದಾರೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುಚೀಂದ್ರ ಪ್ರಸಾದ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
PublicNext
25/02/2021 03:15 pm