ಹಿರಿಯ ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ಘಟನೆಯನ್ನು ನಟಿ ಮೇಘನಾ ಗಾಂವ್ಕರ್ ಖಂಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ಮೇಘನಾ, 'ನಿನ್ನೆ ಏನಾಯಿತು ಎಂದು ನಾನು ನೋಡಿದೆ. ನಿಮ್ಮಂಥಹಾ ಹಿರಿಯ ನಟರನ್ನು ಹೀಗೆ ನಡೆಸಿಕೊಳ್ಳಬಾರದಿತ್ತು. ಈ ರೀತಿಯ ಗೂಂಡಾಗಿರಿಯನ್ನು ಸಹಿಸಿಕೊಳ್ಳುವುದು ಅಸಾಧ್ಯ. ನೀವೊಬ್ಬ ಅದ್ಭುತ ವ್ಯಕ್ತಿ, ನಿಮ್ಮ ಬಗ್ಗೆ ಗೌರವ ಸದಾ ಇದ್ದೇ ಇರುತ್ತದೆ' ಎಂದಿದ್ದಾರೆ ಮೇಘನಾ ಗಾಂವ್ಕರ್.
ಮತ್ತೊಂದು ಟ್ವೀಟ್‌ನಲ್ಲಿ, 'ನಾನು ಜಗ್ಗೇಶ್ ಹಾಗೂ ದರ್ಶನ್ ಇಬ್ಬರಿಗೂ ಗೌರವ ಕೊಡುತ್ತೇನೆ. ಅವರಿಬ್ಬರೂ ಅದ್ಭುತವಾದ ವ್ಯಕ್ತಿಗಳು ಮತ್ತು ಕಲಾವಿದರು. ಜಗ್ಗೇಶ್ v/s ದರ್ಶನ್ ಎಂಬ ಚರ್ಚೆಗೆ ನಾವು ಬೆಂಬಲ ನೀಡಬಾರದು, ಕಲಾವಿದರಾಗಿ ನಾವೆಲ್ಲರೂ ಒಂದೇ ಮತ್ತು ಎಲ್ಲ ಕಲಾವಿದರಿಗೂ ಗೌರವ ಸಿಗಲೇ ಬೇಕು ಅಂತಾ ಮೇಘನಾ ಗಾಂವ್ಕರ್ ಹೇಳಿದ್ದಾರೆ.
PublicNext
24/02/2021 05:25 pm