ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪಂಗೆ ಹುಟ್ಟಿದ ಮಗ ನಾನು, ಹೆದರಿ ಓಡಿ ಹೋಗಲ್ಲ: ಜಗ್ಗೇಶ್‌ ಗರಂ

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು ಸೋಮವಾರ ದರ್ಶನ್ ಅಭಿಮಾನಿಗಳು ಮಾತನಾಡಿರುವ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಲೈವ್ ಬಂದು ಬೇಸರವನ್ನು ಹೊರಹಾಕಿದ್ದಾರೆ.

ಇದು ಬೇಕಿತ್ತ ನಿಮಗೆ ಎಂದು ಬರೆದು ತಾವು ಮಾತನಾಡಿರುವ ವಿಡಿಯೋ ಟ್ವೀಟ್ ಮಾಡಿರುವ ಜಗ್ಗೇಶ್‌, ''ನಾನು ಅಪ್ಪನಿಗೆ ಹುಟ್ಟಿದವನು ಎಲ್ಲಿ ಹೋಗಲ್ಲ. ಹಿಂದೆ ಮುಂದೆ ಮುಚ್ಚಿಟ್ಟುಕೊಂಡು ಯಾಕೆ ಮಾತನಾನಡಲಿ ನಾನೊಬ್ಬ ಆರ್‍ಎಸ್‍ಎಸ್ ಕಾರ್ಯಕರ್ತ. ಒಂದು ವಿಷವನ್ನು ಇಟ್ಟುಕೊಂಡು ನನಗೆ ಬೇಸರ ಮಾಡುತ್ತಿದ್ದಾರೆ. ಸಣ್ಣ ವಿಷಯವನ್ನು ಇಟ್ಟುಕೊಂಡು ನೋವು, ಅಪಮಾನವನ್ನು ಮಾಡಿದರೆ ನನಗೆ ಯಾವುದೇ ನಷ್ಟವಿಲ್ಲ. ನಾನು ಕಳ್ಳತನ, ರಾಬರಿ ಮಾಡಿದ್ದೀನಾ? ಹೆದರಿ ಕೂತಿದೀನಾ? ನಿನ್ನೆ ಬಂದಿರುವವರ ಜೊತೆಯಲ್ಲಿ ಅವರೊಂದಿಗೆ ಕೂತು ಮಾತನಾಡಿದ್ದೇನೆ'' ಎಂದು ತಿಳಿಸಿದ್ದಾರೆ.

ನಾನು ಸ್ವಾಭಿಮಾನಿಯಾಗಿ ಬದುಕುತ್ತಿದ್ದೇನೆ. ನಾನು ನನ್ನ ಬದುಕಲ್ಲೇ ಯಾರ ಬೂಟು ನೆಕ್ಕಿಲ್ಲ ಹಾಗೇ ಮಾಡಿದ್ದರೆ ನಾನು ಎಂಎಲ್‍ಎ, ಮಂತ್ರಿ ಆಗುತ್ತಿದೆ. ನೂರಾರು ಪೋಸ್ಟರ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ. ನೀವು ಹೇಳಿದ್ದನೆಲ್ಲ ನಂಬಲು ಜನ ಒಂದು ಸೈಡ್ ಇಲ್ಲ. ಸತ್ಯ ಹೇಳುವುದಕ್ಕೆ ಸೋಷಿಯಲ್ ಮೀಡಿಯಾ ಇದೆ. ಇದೆನಾ ನೀವು ಹಿರಿಯ ನಟರಿಗೆ ಕೊಡು ಗೌರವಾಗಿದೆಯಾ? ಅನ್ಯಭಾಷೆಯವರು ಬಂದು ಕರ್ನಾಟಕವನ್ನು ದಬ್ಬಾಳಿಕೆ ಮಾಡುತ್ತಿದ್ದಾರೆ. ಬೇರೆಯವರು ಬಂದು ಅವರ ಭಾಷೆಯಲ್ಲಿ ಮಾತನಾಡುವಂತೆ ಪ್ರಚೋದನೆ ಕೊಡುತ್ತಿದ್ದಾರೆ ಕನ್ನಡ ಚಿತ್ರರಂಗ ಹಾಳಾಗಿ ಹೋಗಬೇಕಾ..? ಯಾರು ಹೇಳುವವರು ಕೇಳುವವರು ಇಲ್ಲವಾ ಎಂದು ಪ್ರಶ್ನಿಸಿದ್ದಾರೆ.

Edited By : Vijay Kumar
PublicNext

PublicNext

23/02/2021 11:19 am

Cinque Terre

75.87 K

Cinque Terre

4

ಸಂಬಂಧಿತ ಸುದ್ದಿ