ಬೆಂಗಳೂರು: ಕೆಲ ದಿನಗಳ ಹಿಂದಷ್ಟೆ ನವರಸ ನಾಯಕ ಜಗ್ಗೇಶ್ ಅವರದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು.
ನಿರ್ಮಾಪಕರೊಬ್ಬರ ಜೊತೆ ಫೋನ್ ಕರೆಯಲ್ಲಿ ಜಗ್ಗೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ದರ್ಶನ್ ಅಭಿಮಾನಿಗಳನ್ನು ನಿಂದಿಸಿದ್ದಾರೆ ಎನ್ನುವ ಕಾರಣಕ್ಕೆ ಬಹಳಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಡಿ ಬಾಸ್ ಅಭಿಮಾನಿಗಳು ಮೈಸೂರಿನಲ್ಲಿ ನಡೆಯುತ್ತಿರುವ 'ತೋತಾಪುರಿ' ಚಿತ್ರದ ಚಿತ್ರೀಕರಣದ ಸ್ಪಾಟ್‌ಗೆ ಬಂದು ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದರು. ಅಷ್ಟೇ ಅಲ್ಲದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಜಗ್ಗೇಶ್ ಅವರು ಕೆಲ ಸಮಯ ದರ್ಶನ್ ಅಭಿಮಾನಿಗಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ''ನನ್ನ ತಪ್ಪಲ್ಲ, ನಾನು ಆ ರೀತಿ ಮಾತೇ ಆಡಿಲ್ಲ'' ಎಂದೂ ಎಷ್ಟು ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ದರ್ಶನ್ ಅಭಿಮಾನಿಗಳು ಇರಲಿಲ್ಲ. ಒತ್ತಾಯಕ್ಕೆ ಮಣಿದ ಜಗ್ಗೇಶ್, ದರ್ಶನ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ನಂತರ ದರ್ಶನ್ ಅಭಿಮಾನಿಗಳು ಶೂಟಿಂಗ್‌ಗೆ ಅವಕಾಶ ಮಾಡಿಕೊಟ್ಟು ಅಲ್ಲಿಂದ ತೆರಳಿದ್ದಾರೆ.
PublicNext
22/02/2021 09:22 pm