ಬಾಲಿ: ರಷ್ಯಾ ಮೂಲದ ಮಾಡೆಲ್ ಅಲೆಸ್ಯ ಕಾಫೆಲ್ನಿಕೋವಾ ಅಳಿವಿನಂಚಿನಲ್ಲಿರುವ ಸುಮಾತ್ರನ್ ಆನೆ ಮೇಲೆ ಬೆತ್ತಲೆ ಮಲಗಿ ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಲೆಸ್ಯ ಕಾಫೆಲ್ನಿಕೋವಾ ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ಸುಮಾತ್ರನ್ ಆನೆ ಮೇಲೆ ಬೆತ್ತಲಾಗಿ ಮಲಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಳು. ಇದ ಸಣ್ಣ ವಿಡಿಯೋ ತುಣುಕೊಂದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು, ಪ್ರಾಣಿ ಪ್ರಿಯರು ಅಲೆಸ್ಯ ಹುಚ್ಚಾಟಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.
ಅಲೆಸ್ಯ ವಿರುದ್ಧ ಪ್ರಾಣಿದಯಾ ಸಂಘ ಮತ್ತು ಪ್ರಾಣಿ ಪ್ರೇಮಿಗಳು ಕಿಡಿಕಾರಿದ್ದಾರೆ. ಇದರಿಂದಾಗಿ ಎಚ್ಚೆತ್ತ ಅಲೆಸ್ಯ ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದ ವಿಡಿಯೋ ಡಿಲೀಟ್ ಮಾಡಿದ ನಂತರವೂ ಕೇಳಿ ಬಂದ ಟೀಕೆಗಳಿಂದ ಪಾರಾಗಲು ಮತ್ತೊಂದು ಫೋಟೊ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ಆನೆಯೊಂದಕ್ಕೆ ಸ್ನಾನ ಮಾಡಿಸುತ್ತಿದ್ದಾರೆ. ಈ ಚಿತ್ರದೊಂದಿಗೆ ತಮ್ಮ ಪ್ರಮಾದದ ಕುರಿತು ಸ್ಪಷ್ಟನೆ ನೀಡಿರುವ ಆಕೆ, ನಾನು ಪ್ರಾಣಿ ಪ್ರೇಮಿ. ಈ ಹಿಂದೆ ಪ್ರಾಣಿಗಳ ಸಂರಕ್ಷಣೆಗೆ ಸಾಕಷ್ಟು ದಾನ ಮಾಡಿರುವುದು ಯಾರಿಗೂ ಕಾಣಿಸುವುದಿಲ್ಲ. ನಾನು ಪ್ರಾಣಿಗಳನ್ನು ತುಂಬ ಪ್ರೀತಿಸುತ್ತೇನೆ ಎಂದಿದ್ದಾರೆ.
PublicNext
20/02/2021 03:46 pm