ನಟ ಶಿವರಾಜಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು, ಇದೇ ಫೆ. 19ಕ್ಕೆ 35 ವರ್ಷವಾಯಿತು. ಶಿವಣ್ಣ ಚಿತ್ರರಂಗದಲ್ಲಿ ಮೂರುವರೆ ದಶಕ ಪೂರೈಸಿರುವ ಸಂಭ್ರಮದಲ್ಲಿ ಶಿವಣ್ಣ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಕಾಮನ್ ಡಿಪಿ ಯನ್ನು ವಿನ್ಯಾಸಗೊಳಿಸಿ ಬಿಡುಗಡೆಗೊಳಿಸಿದ್ದಾರೆ.
ಇನ್ನು ಅಭಿಮಾನಿಗಳು 35 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 35 ಕೆ.ಜಿ ತೂಕದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. “ಟಗರು’ ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವರು ಶಿವಣ್ಣ ಅವರ ಕಾಮನ್ ಡಿಪಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆಗೊಳಿಸಿದ್ದು, ಶಿವಣ್ಣ ಅಭಿಮಾನಿಗಳು ಈ ಸಿಡಿಪಿಯನ್ನು ಶೇರ್ ಮಾಡುತ್ತಿದ್ದಾರೆ.
ಅಂದಹಾಗೆ, ಶಿವರಾಜಕುಮಾರ್ ಅಭಿನಯದ ಚೊಚ್ಚಲ ಚಿತ್ರ “ಆನಂದ್’ 1986ರ ಫೆ. 19ರಂದು ಬಿಡುಗಡೆಯಾಗಿತ್ತು. ಇನ್ನು ಶಿವಣ್ಣ ಅವರ 35 ವರ್ಷದ ಸಿನಿಜರ್ನಿಯ ಸಂಭ್ರಮ ಕ್ಕಾಗಿ ಅಭಿಮಾನಿಗಳು ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
PublicNext
20/02/2021 11:07 am