ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಪೊಗರು ಹವಾ ಶುರುವಾಗಿದೆ. ಮೂರು ವರ್ಷದ ನಂತರ ನಟ ಧೃವ ಸರ್ಜಾ ಅವರ ಸಿನಿಮಾ ತೆರೆ ಕಾಣುತ್ತಿದೆ. ಈಗಾಗಲೇ ಸಿನಿಮಾ ದಕ್ಷಿಣ ಭಾರತ ಭಾಗದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸಿನಿಮಾ ಬೆಂಗಳೂರಿನಲ್ಲಿ ಬೆಳ್ಳಗ್ಗೆಯೇ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬರೋಬ್ಬರಿ ಮೂರು ವರ್ಷಗಳ ನಂತರ ಸಿಲ್ವರ್ ಸ್ಕ್ರೀನ್ ಮೇಲೆ ಧ್ರುವ ಕಾಣಿಸಿಕೊಳ್ಳುತ್ತಿದ್ದಾರೆ.
ಒಟ್ಟು 1 ಸಾವಿರಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ತೆರೆ ಕಾಣಲಿರುವ ಪೊಗರು ಈಗಾಗಲೇ ಬೆಂಗಳೂರಿನ 33 ಚಿತ್ರಮಂದಿರಗಳಲ್ಲಿ ಬೆಳಗ್ಗೆ 6:45ಕ್ಕೆ ಶೋ ಆರಂಭವಾಗಿದೆ. ಸಿದ್ದೇಶ್ವರ, ಶ್ರೀನಿವಾಸ, ಲಕ್ಷ್ಮಿ, ಪ್ರಸನ್ನ ಥಿಯೇಟರ್ ನಲ್ಲಿ ಮುಂಜಾನೆ ಶೋ ಆರಂಭವಾಗಿದೆ. ಮೊದಲ ಶೋಗೆ ಥಿಯೇಟರ್‌ಗೆ ಬಂದ ಅಭಿಮಾನಿಗಳು ಧ್ರುವ ಸರ್ಜಾ ಕಟೌಟ್‍ಗೆ ಹೂ, ಹಾಲಿನ ಅಭಿಷೇಕ ಮಾಡಿದ್ದಾರೆ.
ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಕಥೆಯನ್ನು ಹೊಂದಿರುವ ಪೊಗರು ಸಿನಿಮಾ 300 ಚಿತ್ರಮಂದಿಗಳಲ್ಲಿ ಬೆಳಗ್ಗೆ ಶೋ
ಆರಂಭವಾಗಲಿದೆ.
PublicNext
19/02/2021 07:51 am