ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ತಮ್ಮ ನೀಳ ಕೇಶರಾಶಿಯಿಂದಲೇ ಅನೇಕರಿಗೆ ಇಷ್ಟ.. ಈ ಕೇಶಕ್ಕೆ ಕತ್ತರಿ ಹಾಕಿದ್ರಾ..? ಹೀಗಂತ ಫ್ಯಾನ್ಸ್ ಕೇಳುತ್ತಿದ್ದಾರೆ. ಇದಕ್ಕೆ ಕಾರಣ ನಟಿಯ ಲೇಟೆಸ್ಟ್ ಇನ್ ಸ್ಟಾ ಪೋಸ್ಟ್. ನಟಿಯ ಇತ್ತೀಚಿನ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಬಾಬ್ ಕಟ್ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೂದಲು ಶಾರ್ಟ್ ಆದ್ರೂ ಕ್ಯೂಟ್ ನೆಸ್ ಮಾತ್ರ ಕಮ್ಮಿ ಆಗಿಲ್ಲ.ಬ್ಲಾಕ್ ಶಾರ್ಟ್ ಸ್ಕರ್ಟ್ ಮತ್ತು ಆರೆಂಜ್ ಸ್ಪೆಟರ್ ಟೈಪ್ ಟೀ ಶರ್ಟ್ ಧರಿಸಿ ವ್ರೂಮ್ ವ್ರೂಮ್ ಮ್ಯೂಸಿಕ್ ಗೆ ಸೊಂಟ ಬಳುಕಿಸಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಕೂದಲು ಕತ್ತರಿಸಿ ನೀವು ಕಾಮನ್ ಹುಡುಗಿಯಂತಾದ್ರಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಆಕೆ ಹೇರ್ ಕಟ್ ಮಾಡಿಲ್ಲ, ಜಸ್ಟ್ ಜಾಕೆಟ್ ಒಳಗೆ ಹೈಡ್ ಮಾಡಿದ್ದಾರೆ ಅಷ್ಟೇ ಎಂದು ಹೇಳಿದ್ರೆ ಬಹಳಷ್ಟು ಜನರು ನಿವೇದಿತಾ ಹೇರ್ ಕಟ್ ಮಾಡಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.
PublicNext
18/02/2021 12:01 pm