ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಸಿನಿಮಾ ನೋಡದಿದ್ರೂ ಅಣ್ಣನ ಸಿನಿಮಾ ನೋಡಿ: ಧ್ರುವ ಸರ್ಜಾ

ದಾವಣಗೆರೆ: ನನ್ನ ಸಿನಿಮಾ ನೋಡದಿದ್ದರೂ ಪರವಾಗಿಲ್ಲ. ನನ್ನ ಅಣ್ಣನ ಸಿನಿಮಾ ನೋಡಿ ಎಂದು ಧ್ರುವ ಸರ್ಜಾ ಭಾವುಕರಾಗಿ ಮಾತಾಡಿದ್ದಾರೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಆಡಿಯೋ ಭಾನುವಾರ ರಾತ್ರಿ ದಾವಣಗೆರೆಯಲ್ಲಿ ಬಿಡುಗಡೆ ಆಯಿತು. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಬೈರತಿ ಬಸವರಾಜ್, ಶಾಸಕ ರೇಣುಕಾಚಾರ್ಯ, ನಟ ಅರ್ಜುನ್ ಸರ್ಜಾ ಪಾಲ್ಗೊಂಡಿದ್ದರು.

ಪೊಗರು ಆಡಿಯೋ ಬಿಡುಗಡೆ ಸಂದರ್ಭದಲ್ಲೇ ರಾಜಮಾರ್ತಾಂಡ ಸಿನಿಮಾದ ಆಡಿಯೋ ಕೂಡ ರಿಲೀಸ್ ಮಾಡಲಾಯ್ತು. ಆಡಿಯೋ ಲಾಂಚ್ ವೇಳೆ ಧ್ರುವ ಸರ್ಜಾ ಅಗಲಿದ ಅಣ್ಣ ಚಿರಂಜೀವಿ ಸರ್ಜಾರನ್ನು ನೆನೆದರು. ಪೊಗರು ರಿಲೀಸ್ ದಿನ ರಾಜಮಾರ್ತಾಂಡ ಟ್ರೈಲರ್ ರಿಲೀಸ್ ಆಗಲಿದೆ. ಇಂಟರ್ವಲ್ ವೇಳೆ ಟ್ರೈಲರ್ ಲಾಂಚ್ ಆಗಲಿದೆ. ನನ್ನ ಸಿನಿಮಾ ನೋಡದಿದ್ರೂ ಪರವಾಗಿಲ್ಲ. ನನ್ನ ಅಣ್ಣನ ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.

Edited By : Nagaraj Tulugeri
PublicNext

PublicNext

15/02/2021 08:20 am

Cinque Terre

71.56 K

Cinque Terre

6