ಮುಂಬೈ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಟಿಯರನ್ನಾ ಟ್ರೋಲ್ ಮಾಡುವ ಚಾಳಿ ಹೆಚ್ಚಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟಿ ದೀಪಿಕಾ ಪಡುಕೋಣೆಗೆ ಕೆಟ್ಟ ಪದ ಬಳಸುವ ಮೂಲಕ ಕಿರುಕುಳ ನೀಡಿದ್ದಾರೆ. ಈಗ ಪಡುಕೋಣೆಗೆ ಇನ್ ಸ್ಟಾಗ್ರಾಮಲ್ಲಿ ವ್ಯಕ್ತಿಯೊಬ್ಬ ಡೈರೆಕ್ಟ್ ಮೆಸೇಜ್ ಮೂಲಕ ಅವಹೇಳನಕಾರಿ ಪದ ಬಳಸಿ ನಿಂದಿಸಿದ್ದಾನೆ. ಪದೇ ಪದೇ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ತಕ್ಕ ಉತ್ತರ ಕೊಟ್ಟಿರುವ ನಟಿ ಆ ಸ್ಕ್ರೀನ್ ಶಾಟ್ ಅನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿ ಟ್ರೋಲ್ ಮಾಡಿದ್ದರು. ಬಳಿಕ ಪೋಸ್ಟ್ ಡಿಲಿಟ್ ಮಾಡಿದ್ದಾರೆ.
"ವಾಹ್! ನಿಮ್ಮ ಕುಟುಂಬ ಮತ್ತು ಸ್ನೇಹಿತರು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡಬೇಕು." ಎಂದು ಬರೆದುಕೊಂಡಿದ್ದರು
ಈ ವರ್ಷ ನಟಿ ದೀಪಿಕಾ ಪಡುಕೋಣೆ ತುಂಬಾನೆ ಬ್ಯುಸಿಯಾಗಿದ್ದು, ಶಕುನ್ ಬಾತ್ರಾ ಅವರ ಮುಂಬರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಸಹ ನಟಿಸಲಿರುವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
PublicNext
13/02/2021 05:46 pm