ಮುಂಬೈ: ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರು ಸಾಧನೆಗೈಯ ಬಹುದು ಎಂಬ ಮಾತಿಗೆ. ಅನೇಕರು ಇದನ್ನು ನಿಜವಾಗಿಸಿದ್ದಾರೆ. ಹೀಗೆ ನಿರಂತರ ಪ್ರಯತ್ನ, ಶ್ರದ್ಧೆಯಿಂದ ಆಟೋ ಚಾಲಕನ ಮಗಳು ಮಾನ್ಯಾ ಸಿಂಗ್ ಮುಂಬೈನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ 2020ರ ರನ್ನರ್ ಅಪ್ ಆಗಿದ್ದು ಕನಸಿನಂತೆಯೇ ಇರುವ ಒಂದು ಚಂದದ ನೈಜ್ಯ ಕಥೆ.
ಹೌದು. ಉತ್ತರ ಪ್ರದೇಶ ಮೂಲಕ ಮಾನ್ಯ ಸಿಂಗ್ ಬಾಲ್ಯದ ದಿನಗಳನ್ನು ಕಷ್ಟದಲ್ಲಿಯೇ ಕಳೆದಿದ್ದಳು. ಒಪ್ಪೊತ್ತಿನ ಊಟಕ್ಕೂ ಪರದಾಡಿದ ಮಾನ್ಯ 14ನೇ ವರ್ಷಕ್ಕೆ ಮನೆ ಬಿಟ್ಟು ಹೋದ ಅವರು ತಮ್ಮ ಶಿಕ್ಷಣವನ್ನು ಮುಗಿಸಿದ್ದರು. ತಾನು ಈಗಿರುವ ಸ್ಥಳಕ್ಕೆ ತಲುಪಲು ಕಷ್ಟದ ಕೆಲಸವನ್ನೆಲ್ಲ ಮೀರಿ ಬಂದಿದ್ದರು.
ನನ್ನ ಕಣ್ಣೀರು, ರಕ್ತ, ಬೆವರು ನನ್ನ ಕನಸನ್ನು ನನಸು ಮಾಡಿತು. ರಿಕ್ಷಾ ಚಾಲಕನ ಮಗಳಾಗಿ ನನಗೆ ಶಾಲೆಗೆ ಹೋಗುವ ಬದಲು ಚಿಕ್ಕ ವಯಸ್ಸಿನಲ್ಲಿಯೇ ದುಡಿಯಬೇಕಾಯಿತು. ಪುಸ್ತಕಗಳಿಗಾಗಿ ನಾನು ಹಾತೊರೆಯುತ್ತಿದೆ. ಆದರೆ ನನ್ನ ಅದೃಷ್ಟ ಚೆನ್ನಾಗಿರಲಿಲ್ಲ ಎಂದು ಮಾನ್ಯ ಕಷ್ಟದ ದಿನಗಳನ್ನು ನೆನೆದಿದ್ದಾರೆ.
PublicNext
12/02/2021 08:50 pm