ಸ್ಟಾರ್ ನಟರು, ಸ್ಟಾರ್ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಬಹು ಬೇಡಿಕೆಯ ನಟಿ ರಚಿತಾ ರಾಮ್, ಸದ್ಯ ತಮ್ಮ ಬಹು ದಿನಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಪ್ರಸಿದ್ಧ ನಿರ್ದೇಶಕ ಸೂರಿ ಅವರ ಬ್ಯಾಡ್ ಮ್ಯಾನರ್ಸ್ ನಲ್ಲಿ ಅಭಿಷೇಕ್ ಅಂಬರೀಷ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ, ಆ ಮೂಲಕ ತಾವು ಸೂರಿ ಅವರ ಜೊತೆ ಕೆಲಸ ಮಾಡಬೇಕು ಎಂಬ ತಮ್ಮ ಕನಸು ನನಸಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.
ಫೆಬ್ರವರಿ 18 ರಿಂದ 2ನೇ ಹಂತದ ಶೂಟಿಂಗ್ ಆರಂಭವಾಗಲಿದ್ದು ನಟಿ ರಚಿತಾ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ,ನಾನು ಸೂರಿ ಚಿತ್ರಗಳ ಅಭಿಮಾನಿಯಾಗಿದ್ದೇನೆ. ಅವರು ನಿರ್ದೇಶನದಲ್ಲಿ ತಮ್ಮ ಸಿಗ್ನೇಚರ್ ಸ್ಟೈಲ್ ನ ಸುಕ್ಕಾ ಶೈಲಿ ತರುತ್ತಾರೆ ಎಂದು ರಚಿತಾ ಹೇಳಿದ್ದಾರೆ.
PublicNext
12/02/2021 03:57 pm