ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ನಟಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವು ವರ್ಷಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿರುವ ನಟಿ ಸಂಜನಾ ಗಲ್ರಾನಿ, ಆಸ್ಪತ್ರೆಯಲ್ಲೇ ನಮಾಜ್ ಮಾಡುತ್ತಿದ್ದಾರೆ.
ಸದ್ಯ ಅವರು ಎಲ್ಲಿ ಮತ್ತು ಯಾವ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಮಾಹಿತಿ ಇಲ್ಲ. ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಜನಾ ''ಈ ಹಿಂದಿಗಿಂತಲೂ ಬಲವಾಗಿ ಮರಳಲು ಚೇತರಿಸಿಕೊಳ್ಳುತ್ತಿದ್ದೇನೆ'' ಎಂದು ಪೋಸ್ಟ್ ಹಾಕಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಕಳೆದ ವಾರ ಇನ್ಸ್ಟಾಗ್ರಾಂನಲ್ಲಿ ಲೈವ್‌ಗೆ ಬಂದಿದ್ದ ಸಂಜನಾ ತಮ್ಮ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದರು. ಡ್ರಗ್ಸ್ ಜಾಲದ ಸಂಬಂಧ ನಟಿ ಸಂಜನಾ 2020ರ ಸೆಪ್ಟೆಂಬರ್ 8 ರಂದು ಜೈಲು ಪಾಲಾಗಿದ್ದರು. ಸುಮಾರು 90 ದಿನಗಳ ಸೆರೆಮನೆ ವಾಸದ ನಂತರ ಜಾಮೀನು ದೊರೆತ ಹಿನ್ನಲೆ ಬಿಡುಗಡೆ ಹೊಂದಿದ್ದರು.
PublicNext
12/02/2021 09:15 am