ಚಂದನವನದ ಚೆಂದದ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಹಲವು ವರ್ಷಗಳ ಪ್ರೀತಿಗೆ ಈಗ ಮದುವೆಯ ಮುದ್ರೆ ಬೀಳುತ್ತಿದೆ. 'ಲವ್ ಮಾಕ್‌ಟೇಲ್' ಸಿನಿಮಾದಿಂದ ಭಾರಿ ಯಶಸ್ಸು ಪಡೆದ ಈ ರಿಯಲ್ ಲೈಫ್ ಪ್ರೇಮಿಗಳು ಫೆ.14ರಂದು ಎಲ್ಲರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ.
ಅದಕ್ಕೂ ಮುನ್ನ ಮಿಲನಾ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿವೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಶೇಷ ವಿಡಿಯೋವನ್ನು ಮಿಲನಾ ಹಂಚಿಕೊಂಡಿದ್ದಾರೆ. 'ಮದುವೆ ಶಾಸ್ತ್ರಗಳ ಪ್ರಾರಂಭ. ನಮ್ಮ ಕುಟುಂಬದಲ್ಲಿ ಯಾವುದೇ ಮದುವೆ ನಡೆದರೂ ಮೊದಲು ಮಾಡುವ ಪೂಜೆ ಇದು' ಎಂದು ಅವರು ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದ್ದು, ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಮಿಲನಾ-ಕೃಷ್ಣ ಜೋಡಿಗೆ ಶುಭಕೋರುತ್ತಿದ್ದಾರೆ.
PublicNext
09/02/2021 04:49 pm