ಮುಂಬೈ: 87 ಬ್ಲೂ ಫಿಲಂ ವಿಡಿಯೋಗಳನ್ನು ಚಿತ್ರೀಕರಿಸಿ, ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಆರೋಪದಡಿ ಬಂಧಿಸಲ್ಪಟ್ಟಿರುವ ನಟಿ ಗೆಹಾನಾ ವಸಿಷ್ಠ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ.
ಹೌದು. ಸಿನಿಮಾ, ಕಿರುತೆರೆಯಲ್ಲಿ ಅವಕಾಶ ಸಿಗದೆ ಹೆಣಗಾಡುತ್ತಿರುವ ನಟ, ನಟಿಯರನ್ನು 'ಬ್ಲೂ ಫಿಲಂ'ನಲ್ಲಿ ನಟಿಸುವಂತೆ ಆಮಿಷವೊಡ್ಡಿದ್ದಾರೆ. ಅವರು ನಟರಿಗೆ ಪ್ರತಿ ಚಿತ್ರಕ್ಕೆ 15ರಿಂದ 20 ಸಾವಿರ ರೂ. ಪಾವತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಗೆಹನಾಗೆ ಸಂಬಂಧಿಸಿದ ಮೂರು ಬ್ಯಾಂಕ್ ಖಾತೆಗಳಲ್ಲಿ 36 ಲಕ್ಷ ರೂ. ಸಿಕ್ಕಿದೆ. ಈ ಹಣವು ಆ್ಯಪ್ ಚಂದಾದಾರರ ಮೂಲಕ ಗಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.
PublicNext
09/02/2021 04:21 pm