ಮುಂಬೈ: ದಿವಂಗತ ನಟ ರಿಷಿ ಕಪೂರ್ ಅವರ ಸಹೋದರ ಹಾಗೂ ಬಾಲಿವುಡ್ನ ಖ್ಯಾತ ನಟ ರಾಜೀವ್ ಕಪೂರ್ (58) ಇಂದು ಮುಂಬೈನ ಚೆಂಬೂರಿನಲ್ಲಿರುವ ಇಲೆಕ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಎದೆಯಲ್ಲಿ ನೋವು ಕಾಣಿಸಿಕೊಂಡ ಕೂಡಲೇ ರಣಧೀರ್ ಕಪೂರ್ ಅವರು ರಾಜೀವ್ ಅವರನ್ನು ಮುಂಬೈನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಚಿಕಿತ್ಸೆ ನೀಡುವ ಮೊದಲೇ ರಾಜೀವ್ ಅವರು ಇಹಲೋಕ ತ್ಯಜಿಸಿದ್ದಾರೆ.
ತಮ್ಮನ ಸಾವಿನ ಸುದ್ದಿಯನ್ನು ರಣಧೀರ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ. ''ನನ್ನ ಕಿರಿಯ ತಮ್ಮನನ್ನು ಕಳೆದುಕೊಂಡಿದ್ದೇನೆ. ವೈದ್ಯರು ಜೀವ ಉಳಿಸಲು ಶ್ರಮಿಸಿದರಾದರೂ ಸಫಲವಾಗಲಿಲ್ಲ. ತಮ್ಮನ ಮೃತ ದೇಹವನ್ನು ತೆಗೆದುಕೊಂಡು ಹೋಗಲು ಕಾಯುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.
PublicNext
09/02/2021 03:04 pm