ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ದಿಲ್ದಾರ, ಅಭಿಮಾನಿಗಳ ನೆಚ್ಚಿನ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ತುಂಬ ವಿಶೇಷವಾದ ದಿನ. ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಆಗಿ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ದರ್ಶನ್, ಇದೇ ದಿನ ಅಂದರೆ 19 ವರ್ಷಗಳ ಹಿಂದೆ ನಾಯಕನಾಗಿ ಸಿನಿಪ್ರೇಕ್ಷಕರ ಮುಂದೆ ಬಂದಿದ್ದರು. ದರ್ಶನ್ ಹೀರೋ ಆಗಿ ಬಣ್ಣ ಹಚ್ಚಿದ ಮೆಜೆಸ್ಟಿಕ್ ಸಿನಿಮಾ ರಿಲೀಸ್ ಆಗಿ ಇವತ್ತಿಗೆ ಬರೋಬ್ಬರಿ 19ವರ್ಷಗಳು ಕಳೆದಿವೆ. ದರ್ಶನ್ ನಾಯಕನಾಗಿ ತೆರೆಮೇಲೆ ಮಿಂಚುವ ಮೊದಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಒಬ್ಬ ತಂತ್ರಜ್ಞನಾಗಿ ಬಣ್ಣದ ಲೋಕದಲ್ಲಿ ವೃತ್ತಿ ಜೀವನ ಪ್ರಾರಂಭಸಿದ್ದರು. ಆದರೆ ನಾಯಕನಾಗಿ ಮಿಂಚಿದ್ದು ಮೆಜೆಸ್ಟಿಕ್ ಸಿನಿಮಾ ಮೂಲಕ. ಅಪ್ಪ ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗಕಂಡ ಲೆಜೆಂಡ್ ಕಲಾವಿದ. ಆದರು ಮಗ ಹೀರೋ ಆಗಿ ಮಿಂಚುವುದು ಅಷ್ಟು ಸುಲಭವಾಗಿರಲಿಲ್ಲ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ 'ಮೆಜೆಸ್ಟಿಕ್'. ಫೆಬ್ರವರಿ 08ಕ್ಕೆ 'ಮೆಜೆಸ್ಟಿಕ್' ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗಿತ್ತು. ಈ ಇದೀಗ 19 ವರ್ಷಗಳೇ ಕಳೆದಿದೆ. ದರ್ಶನ್ ಬೆಳ್ಳಿತೆರೆಯಲ್ಲಿ ದರ್ಶನ್ ಹೀರೋಯಿಸಂ ಶುರುವಾಗಿ ಇಂದಿಗೆ 19 ವರ್ಷ ಆಗಿದೆ.
PublicNext
08/02/2021 04:03 pm