ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂಗನಾ ಟ್ವೀಟ್ ಡಿಲೀಟ್ ಮಾಡಿದ ಟ್ವಿಟರ್ : ಯಾಕೆ ಗೊತ್ತಾ?

ಹೊಸದಿಲ್ಲಿ: ಬರೀ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ನಟಿ ಕಂಗಾನರ ಕೆಲವು ಟ್ವೀಟ್ ಗಳನ್ನು ಟ್ವಿಟರ್ ಡಿಲಿಟ್ ಮಾಡಿದೆ.

ಹೌದು ಟ್ವಿಟರ್ ನ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಬಾಲಿವುಡ್ ನಟಿ ಕಂಗನಾ ರಣಾವತ್ ರ ಕೆಲವು ಟ್ವೀಟ್ ಗಳನ್ನು ಟ್ವಿಟರ್ ಅಳಿಸಿ ಹಾಕಿದೆ.

ಅಂತಾರಾಷ್ಟ್ರೀಯ ಗಣ್ಯರ ಟ್ವೀಟ್ ಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ದ್ವೇಷ ಪೂರಿತ ಮಾತುಗಳನ್ನಾಡಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

"ಟ್ವಿಟರ್ ನ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡುವ ಟ್ವೀಟ್ ಗಳನ್ನು ನಾವು ಅಳಿಸಿ ಹಾಕಿದ್ದೇವೆ" ಎಂದು ಟ್ವಿಟರ್ ಪ್ರತಿಕ್ರಿಯೆ ನೀಡಿದೆ. ಟ್ವೀಟ್ ನಲ್ಲಿ ಅವರು ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದರು ಮಾತ್ರವಲ್ಲದೇ ಭಾರತೀಯ ಕ್ರಿಕೆಟಿಗರನ್ನು ದೋಭಿ ಘಾಟ್ ನ ನಾಯಿ ಎಂದಿದ್ದರು.

Edited By : Nirmala Aralikatti
PublicNext

PublicNext

04/02/2021 06:50 pm

Cinque Terre

40.95 K

Cinque Terre

6

ಸಂಬಂಧಿತ ಸುದ್ದಿ