ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೆಬ್ರವರಿ ಮೊದಲ ವಾರವೇ ತೆರೆಗೆ ಬರಲು ಸಿದ್ಧವಾಯ್ತು "ಶ್ಯಾಡೋ" ಸಿನಿಮಾ

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ "ಶ್ಯಾಡೋ" ಚಿತ್ರ ಈ ಫೆಬ್ರವರಿ ತಿಂಗಳ ಮೊದಲ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ರವಿ ಗೌಡ ನಿರ್ದೇಶನದ ಈ ಚಿತ್ರಕ್ಕೆ ಅಚ್ಚು ಸಂಗೀತ ನೀಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಛೋಟಾ ಕೆ ಪ್ರಸಾದ್ ಸಂಕಲನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿದೆ. ಶ್ರೀ ಕನಕದುರ್ಗ ಚಲನಚಿತ್ರ ಲಾಂಛನದಲ್ಲಿ ಚಕ್ರವರ್ತಿ ಸಿ.ಹೆಚ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಶೋಭಿತಾ ರಾಣಾ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಶ್ರೀ ಗಿರಿ, ಶ್ರವಣ್, ಗಿರಿಶಾಮ್, ಸತ್ಯದೇವ್, ಸಿರಿ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

Edited By : Nagaraj Tulugeri
PublicNext

PublicNext

01/02/2021 10:31 pm

Cinque Terre

49.59 K

Cinque Terre

1