ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಟ್ ಆಗಿ ಕಾಣಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಕಂಡ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಆದರೆ ಕೆಲ ಅಭಿಮಾನಿಗಳು ವಿಶೇಷ ಮನವಿ ಸಲ್ಲಿಸಿದ್ದಾರೆ.
ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ರಚಿತಾ ರಾಮ್ ಖುರ್ಚಿ ಮೇಲೆ ಕುಳಿತಿರುವ ಫೋಟೋ ಇದಾಗಿದೆ. ಆದರೆ ಫೋಟೋವನ್ನು ರಚಿತಾ ರಾಮ್ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಪೋಸ್ಟ್ ಮಾಡಿಲ್ಲ. ಮತ್ತೊಂದು ಫೋಟೋದಲ್ಲಿ ಡಿಂಪಲ್ ಕ್ವೀನ್ ಸೀರೆ ತೊಟ್ಟು ವೇದಿಕೆ ಮೇಲೆ ನಿಂತಿರುವುದನ್ನು ಕಾಣಬಹುದಾಗಿದೆ.
ಈ ಎರಡೂ ಫೋಟೋಗೂ ನೆಟ್ಟಿಗರು ತಮ್ಮದೆಯಾದ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ''ಮೇಡಂ ನಿಮಗೆ ಸೀರೆಯೆ ಚೆನ್ನಾಗಿ ಒಪ್ಪುತ್ತದೆ'' ಎಂದು ಕೆಲ ನೆಟ್ಟಿಗರು ಹೇಳಿದ್ದಾರೆ.
ಇನ್ನು ಕೆಲವರು ಖಾರವಾಗಿ ಕಮೆಂಟ್ ಮಾಡಿದ್ದಾರೆ. ''ಮೇಡಂ ನೀವು ಕನ್ನಡಿಗರಾಗಿ ಈ ರೀತಿ ಬಟ್ಟೆ ಹಾಕಬೇಡಿ. ಇದು ನಮ್ಮ ನಾಡಿನ ಹೆಣ್ಣು ಮಕ್ಕಳ ಸಂಸ್ಕೃತಿಯಲ್ಲ. ದಯವಿಟ್ಟು ಈ ರೀತಿಯ ಬಟ್ಟೆ ಹಾಕಬೇಡಿ'' ಎಂದು ಅಭಿಮಾನಿಯೋರ್ವ ವಿಶೇಷ ಮನವಿ ಸಲ್ಲಿಸಿದ್ದಾರೆ.
PublicNext
31/01/2021 10:52 pm