ಕೊನೆಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾದ ರಿಲೀಸ್ ದಿನಾಂಕ ಪ್ರಕಟವಾಯಿತು. ಜುಲೈ 16 ರಂದು ಕೆಜಿಎಫ್ 2 ಸಿನಿಮಾ ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದೆ ಎಂದು ಹೊಂಬಾಳೆ ಫಿಲಂಸ್ ಘೋಷಿಸಿದೆ.
ಇಂದು ಬೆಳಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಸಂಜೆ 6.32ಕ್ಕೆ ಕೆಜಿಎಫ್ ರಿಲೀಸ್ ದಿನಾಂಕ ಪ್ರಕಟಿಸುವುದಾಗಿ ಮಾಹಿತಿ ನೀಡಿತ್ತು. ಹೇಳಿದಂತೆ ಕೆಜಿಎಫ್ ಚಿತ್ರದ ಬಿಡುಗಡೆ ದಿನವನ್ನು ಬಹಿರಂಗಪಡಿಸಿದೆ.
ಕನ್ನಡದ ಸ್ಟಾರ್ ನಟರ ಚಿತ್ರಗಳು ಎಲ್ಲವೂ ಬಿಡುಗಡೆಯಾದ್ಮೇಲೆ ಕೆಜಿಎಫ್ ಬರಲು ನಿರ್ಧರಿಸಿದೆ. ಪೊಗರು, ರಾಬರ್ಟ್, ಯುವರತ್ನ, ಕೋಟಿಗೊಬ್ಬ 3, ಸಲಗ, ಭಜರಂಗಿ 2 ಚಿತ್ರಗಳು ಮೇ ತಿಂಗಳ ಕೊನೆಯವರೆಗೂ ಡೇಟ್ ಲಾಕ್ ಮಾಡಿವೆ. ಕೊನೆಯದಾಗಿ ರಾಕಿ ಬಾಯ್ ಭರ್ಜರಿ ಎಂಟ್ರಿ ಕೊಡಲಿದ್ದಾನೆ.
PublicNext
29/01/2021 10:38 pm