ಕನ್ನಡ ಬಿಗ್‌ಬಾಸ್ ಸೀಸನ್ 8ರ ಆರಂಭಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ರಿಯಾಲಿಟಿ ಶೋವನ್ನು ನಡೆಸಿಕೊಡಲು ಕಿಚ್ಚ ರೆಡಿಯಾಗಿದ್ದಾರೆ. ಸದ್ಯ ದೊಡ್ಮನೆಯಿಂದ ಬಿಡುಗಡೆಯಾದ ಹೊಸ ಪ್ರೊಮೋ ವೈರಲ್ ಆಗಿದೆ.
ಪ್ರೋಮೋದಲ್ಲಿ ಜೆರಾಕ್ಸ್ ಮಾಡಲು ಸುದೀಪ್ ಹೇಳುವಾಗ ಜೆರಾಕ್ಸ್ ಪೇಪರ್ ನಲ್ಲಿ ಪದೇ ಪದೇ 8 ಎಂಬ ಬರವಣಿಗೆ ಕಾಣಿಸುತ್ತದೆ. ನಂತರ ಕಿಚ್ಚ ಇದು ಸೀಸನ್ 8ರ ಬಗ್ಗೆ ಯೋಚಿಸುವ ಸಣ್ಣ ಟ್ವಿಸ್ಟ್ ನೀಡಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳುವ ಸನ್ನಿವೇಶ ಇದೆ.
ಖಾಸಗಿ ವಾಹಿನಿ ಹೊರಬಿಟ್ಟಿ ಪ್ರೋಮೋವನ್ನು ರೀ ಟ್ವೀಟ್ ಮಾಡಿ ಕಿಚ್ಚ ಸುದೀಪ್, ಬಿಗ್‌ಬಾಸ್ ಕನ್ನಡ ಸೀಸನ್-8 ಬರುತ್ತಿದೆ. ನೀವು ಮುಂದಿನ 100 ದಿನದ ಮನರಂಜನೆಗಾಗಿ ತಯಾರಾಗಿ ಎಂದು ಬರೆದುಕೊಂಡಿದ್ದಾರೆ.
PublicNext
28/01/2021 06:56 pm