ವರುಣ್ ಧವನ್ ಬಾಲಿವುಡ್ ನ ಯಂಗ್ ನಟರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ನಟನ ಪರ್ಸನಲ್ ಲೈಫ್ ಸಾಕಷ್ಟು ಸುದ್ದಿಯಲ್ಲಿದೆ. ತನ್ನ ಗರ್ಲ್ಫ್ರೆಂಡ್ ನತಾಶಾ ದಲಾಲ್ ಜೊತೆ ಧವನ್ ಹಸೆಮಣೆ ಏರಿದ್ದಾರೆ.
ಬಾಲಿವುಡ್ ನಟ ವರುಣ್ ಧವನ್ ಹಾಗೂ ಅವರ ಬಹುಕಾಲದ ಗೆಳತಿ ನತಾಶಾ ದಲಾಲ್ ವಿವಾಹ ಅದ್ದೂರಿಯಾಗಿ ನೆರವೇರಿದೆ. ಮದುವೆ ಮುಂಬೈನ ಐಷಾರಾಮಿ ದಿ ಮ್ಯಾನ್ಶನ್ ಹೋಟೆಲ್ ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದೆ.
ಇನ್ನುಆಪ್ತರಿಗಷ್ಟೇ ಆಮಂತ್ರಣ ನೀಡಲಾಗಿತ್ತು. ಮೇ ತಿಂಗಳಲ್ಲೇ ಮದುವೆಯಾಗಬೇಕಾಗಿದ್ದ ಜೋಡಿ ಕೊರೊನಾ ಕಾರಣದಿಂದ, ಆಪ್ತರ ಸಮ್ಮುಖದಲ್ಲಿ ಈಗ ವಿವಾಹವಾಗಿದ್ದಾರೆ.
ವರುಣ್-ನತಾಶಾ ಅವರದ್ದು ಬಾಲ್ಯದ ಪ್ರೇಮ. ಶಾಲಾ ದಿನಗಳಲ್ಲೇ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ, ಇಬ್ಬರೂ ಪ್ರೇಮದ ವಿಚಾರವನ್ನು ಗುಟ್ಟಾಗಿಟ್ಟಿದ್ದರು. ನತಾಶಾ ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್. ಅವರು ತಮ್ಮ ಉಡುಗೆ ಡಿಸೈನಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದ್ದು, ಸೆಲೆಬ್ರಿಟಿಗಳಿಗೆ ಆಮಂತ್ರಣ ನೀಡಲಾಗಿದೆ.
PublicNext
25/01/2021 04:39 pm