ಬೆಂಗಳೂರು : ಕಿಚ್ಚ ಸುದೀಪ್ ನಟನೆ ಜತೆಗೆ ಸಾಕಷ್ಟು ಬ್ರಾಂಡ್'ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಅದೇ ರೀತಿ ಇದೀಗ ಡೆನ್ವರ್ ಫರ್ಪ್ಯೂಮ್ ಬ್ರಾಂಡ್ಗೂ ರಾಯಭಾರಿಯಾಗಿದ್ದಾರೆ. ಭಾನುವಾರ ನಗರದ ಎಂಜಿ ರಸ್ತೆಯಲ್ಲಿನ ತಾಜ್ ಹೊಟೇಲ್'ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸ್ವತಃ ಕಿಚ್ಚ ಸುದೀಪ್ ಮತ್ತು ಡೆನ್ವರ್ ಕಂಪನಿಯ ನಿರ್ದೇಶಕ ಸೌರವ್ ಗುಪ್ತಾ ಭಾಗವಹಿಸಿ ಪ್ರಾಡಕ್ಟ್ ಮತ್ತು ಡೆನ್ವರ್ ಬಗ್ಗೆ ಮಾಹಿತಿ ನೀಡಿದರು.
ಬ್ರಾಂಡ್ ಮಾರ್ಕೆಂಟಿಂಗ್ ಮತ್ತು ಸೇಲ್ಸ್ ನಿರ್ದೇಶಕರಾಗಿರುವ ಸೌರವ್ ಗುಪ್ತಾ, ಈಗಾಗಲೇ ನಾವು ಕಳೆದ ಹಲವು ವರ್ಷಗಳಿಂದ ಈ ಮಾರುಕಟ್ಟೆಯಲ್ಲಿದ್ದೇವೆ. ದಕ್ಷಿಣ ಮಾರುಕಟ್ಟೆಯಲ್ಲಿಯೂ ಒಳ್ಳೆಯ ಹೋಲ್ಡ್ ಸೃಷ್ಟಿ ಮಾಡಿದ್ದೇವೆ. ಅದರಂತೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಸೇರಿ ಬಹುಭಾಷೆಗಳಲ್ಲಿ ಹೆಸರು ಮಾಡಿರುವ ಬಾದಷಹ ಕಿಚ್ಚ ಸುದೀಪ್ ರಾಯಭಾರಿ ಆಗಿದ್ದಾರೆ.
ನಮ್ಮ ಬ್ರಾಂಡ್ ಟ್ಯಾಗ್ ಲೈನ್ ದಿ ರಿಯಲ್ ಸೆಂಟ್ ಆಫ್ ಸಕ್ಸಸ್. ಇದೀಗ ಆ ರೀತಿ ಯಶಸ್ಸು ಕಂಡ ಸುದೀಪ್ ಅವರು ನಮ್ಮ ಬಳಗ ಸೇರಿಕೊಂಡಿದ್ದಕ್ಕೆ ಅವರಿಗೆ ನಮ್ಮ ಕಡೆಯಿಂದ ಸ್ವಾಗತ ಎಂದರು.
ಡೆನ್ವರ್ ಫರ್ಪ್ಯೂಮ್ ಮತ್ತು ಡಿಯೋಡ್ರಂಟ್ ರಾಯಭಾರಿಯಾಗಿ ಸುದೀಪ್ ಮಾತನಾಡಿ, ಸಿನಿಮಾ ಕ್ಷೇತ್ರದಲ್ಲಿ ಈ ಥರಹದ ಪ್ರಾಡಕ್ಟ್'ಗಳು, ಬ್ರಾಂಡ್'ಗಳ ಅವಕಾಶ ಸಹಜ. ಯಾವ ಬ್ರಾಂಡ್ ನಮಗೆ ಹೊಂದಾಣಿಕೆ ಆಗುತ್ತದೋ ಅದನ್ನು ಆಯ್ದುಕೊಳ್ಳಬೇಕು. ಸೌರವ್ ಅವರು ಈ ಬ್ರಾಂಡ್ ಬಗ್ಗೆ ಹೇಳಿದಾಗ, ಖುಷಿಯಾಯಿತು. ಈಗಾಗಲೇ ಹಿಂದಿಯಲ್ಲಿ ಶಾರುಖ್ ಖಾನ್, ತೆಲುಗಿನಲ್ಲಿ ಮಹೇಶ್ ಬಾಬು ಈ ಬ್ರಾಂಡ್ ರಾಯಭಾರಿಯಾಗಿದ್ದಾರೆ. ಅದೇ ರೀತಿ ಡೆನ್ವರ್ ಟೀಮ್ ಸಹ ಹಾಗೇ ಇದೆ. ಹಾಗಾಗಿ ನಾನು ಈ ಪ್ರಾಡಕ್ಟ್ ಮುಖವಾಗಿದ್ದೇನೆ ಎಂದರು.
PublicNext
25/01/2021 03:30 pm