ಕೆಜಿಎಫ್ ಸಿನಿಮಾ ಸರಣಿ ಕರ್ನಾಟಕದ ಅತ್ಯಂತ ದೊಡ್ಡ ಬಜೆಟ್‌ನ ಸಿನಿಮಾ. ಕೆಜಿಎಫ್ ಮೊದಲ ಚಾಪ್ಟರ್‌ಗಿಂತಲೂ ಹೆಚ್ಚು ಹಣವನ್ನು ಕೆಜಿಎಫ್ 2 ಸಿನಿಮಾಕ್ಕಾಗಿ ಖರ್ಚು ಮಾಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರ್. ಕೆಜಿಎಫ್ 2 ಸಿನಿಮಾವು ಕೆಜಿಎಫ್ ಸರಣಿಯ ಕೊನೆಯ ಸಿನಿಮಾ ಆಗಿದ್ದು, ಭಾರಿ ಅದ್ಧೂರಿಯಾಗಿಯೇ ಸಿನಿಮಾವನ್ನು ಪ್ರೆಸೆಂಟ್ ಮಾಡಲು ನಿರ್ಣಯಿಸಿ ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.
ಕೆಜಿಎಫ್ ಚಾಪ್ಟರ್ 1 ಗೆ ಹೋಲಿಸಿದರೆ ಕೆಜಿಎಫ್ 2 ನಲ್ಲಿ ದೊಡ್ಡ ಸ್ಟಾರ್ ನಟರ ದಂಡೇ ಇದೆ. ಸ್ಟಾರ್ ನಟರು ಮಾತ್ರವೇ ಅಲ್ಲದೆ, ಸಿನಿಮಾದ ಮೇಕಿಂಗ್, ಸೆಟ್‌ಗಳಿಗೂ ಸಹ ಭಾರಿ ಬಂಡವಾಳ ಹೂಡಲಾಗಿದೆ.' ಕೆಜಿಎಫ್ 2 ಸಿನಿಮಾದ ಅತ್ಯಂತ ಪ್ರಮುಖ ಅಂಶ ಅಧೀರ v/s ರಾಕಿ ಭಾಯ್. ಈ ಇಬ್ಬರೂ ಸಿನಿಮಾದ ಕೊನೆಯಲ್ಲಿ ಮುಖಾ-ಮುಖಿ ಆಗುತ್ತಿದ್ದು, ಸಿನಿಮಾದ ಅತ್ಯಂತ ಪ್ರಮುಖ ಆಕ್ಷನ್ ಸನ್ನಿವೇಶ ಇದಾಗಿರಲಿದೆ.
ಹಾಗಾಗಿಯೇ ಅತಿ ಹೆಚ್ಚು ಹಣವನ್ನು ಈ ಕೊನೆಯ ದೃಶ್ಯಕ್ಕಾಗಿ ಖರ್ಚು ಮಾಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಮೂಲಗಳ ಪ್ರಕಾರ ರಾಕಿ ಭಾಯ್- ಅಧೀರನ ನಡುವಿನ ಒಂದು ಫೈಟ್ ದೃಶ್ಯಕ್ಕಾಗಿ ಸುಮಾರು 12 ಕೋಟಿ ಹಣ ಖರ್ಚು ಮಾಡಲಾಗಿದೆಯಂತೆ.
PublicNext
20/01/2021 07:39 pm