ನವದೆಹಲಿ: ಹಿಂದಿ ಬಿಗ್‌ಬಾಸ್ ಸೀಸನ್ 14ರಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ಪ್ರವೇಶಿಸಿದಾಗಿನಿಂದ ದೊಡ್ಮನೆಯಲ್ಲಿ ಮನರಂಜನೆ ಮನೆ ಮಾಡಿದೆ. ಪ್ರತಿದಿನ ಹೊಸ ನಾಟಕ ತೆರೆದುಕೊಳ್ಳುತ್ತಿದೆ. ಡ್ಯಾನ್ಸಿಂಗ್ ಬ್ಯೂಟಿ ಸಾವಂತ್ ಕೆಲವೊಮ್ಮೆ ಅಭಿನವ್ ಶುಕ್ಲಾ ಅವರಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾಳೆ. ಹೀಗಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ರಾಖಿ ಸಾರ್ವಜನಿಕರಿಗೆ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ ಮತ್ತು ಜನರು ಅವರನ್ನು ತುಂಬಾ ಇಷ್ಟಪಡುತ್ತಾರೆ ಎಂದು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಆದರೆ ಈ ಮಧ್ಯೆ ರಾಖಿ ಸಾವಂತ್ ತಪ್ಪನ್ನು ಮಾಡಿದ್ದಾರೆ.
ಬಿಗ್‌ಬಾಸ್ ಮನೆಗೆ ಗೆಸ್ಟ್ ಕಂಟೆಸ್ಟೆಂಟ್ ಆಗಿ ಬಂದ ರಾಖಿ ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾರೆ. ಸ್ಪರ್ಧಿಗಳನ್ನು ರೆಡ್ ಮತ್ತು ಯೆಲ್ಲೋ ಟೀಂ ಮಾಡಿ ರುಬೀನಾ ದಿಲಾಯಕ್ ಹಾಗೂ ರಾಹುಲ್ ವೈದ್ಯರನ್ನು ಟೀಂ ನಾಯಕರನ್ನಾಗಿ ಮಾಡಲಾಗಿದೆ. ಸ್ಪರ್ಧಿ ಅರ್ಶಿ ಖಾನ್ ಸ್ಮೋಕಿಂಗ್ ರೂಂ ಸಮೀಪದ ಟಾಯ್ಲೆಟ್ ಒಳಗೆ ಹೋಗಿ ಹೊರಗೆ ಬರದೆ ಹಠ ಮಾಡಿದ್ದಾರೆ. ಇತ್ತ ಸುಸ್ಸೂ ತಡೆಯೋಕೆ ಆಗದೆ ರಾಖಿ ಸಾವಂತ್ ಪ್ಯಾಂಡ್‌ನಲ್ಲೇ ವಿಸರ್ಜನೆ ಮಾಡಿದ್ದಾರೆ. ಕೂಡಲೇ ತಂಡದ ನಾಯಕಿ ರುಬೀನಾಳನ್ನು ಕರೆದು, ನಾನು ಪ್ಯಾಂಟ್‌ನಲ್ಲೇ ಮೂತ್ರ ಮಾಡಿದೆ, ಯಾರಿಗೂ ಹೇಳಬೇಡಿ ಎಂದಿದ್ದಾರೆ.
ಆಟದ ನಿಯಮವನ್ನು ಮುರಿದ ನಾಯಕಿ ರುಬೀನಾ ರಾಖಿಯನ್ನು ಮೆಲ್ಲಗೆ ಮನೆಯೊಳಗೆ ಕಳುಹಿಸಿ ಒಳಉಡುಪು ಬದಲಾಯಿಸಿಕೊಂಡು ಬರುವಂತೆ ಹೇಳಿದ್ದಾರೆ. ಅವರ ನಿರ್ಧಾರದಿಂದ ತಂಡವು ಅಂಕ ಕಳೆದುಕೊಂಡರೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
PublicNext
20/01/2021 11:31 am