ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ತಯಾರಾಗಲಿರುವ 'ಸಲಾರ್' ಸಿನಿಮಾ ಹೈದರಾಬಾದ್‌ನಲ್ಲಿ ಇಂದು ಅದ್ಧೂರಿಯಾಗಿ ಆರಂಭವಾಗಿದೆ. ಈ ಮುಹೂರ್ತ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಭಾಸ್ ಮತ್ತು ಯಶ್ ಈಗ ನ್ಯಾಷನಲ್ ಸ್ಟಾರ್‌ಗಳು. ಇಬ್ಬರಿಗೂ ಬಹುದೊಡ್ಡ ಅಭಿಮಾನಿ ಬಳಗ ಇದೆ. ಇಬ್ಬರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಇಬ್ಬರು ನ್ಯಾಷನಲ್ ಸ್ಟಾರ್‌ಗಳನ್ನು ಒಂದೇ ಫೋಟೋದಲ್ಲಿ ಕಂಡ ಫ್ಯಾನ್ಸ್ ಅದ್ಯಾವಾಗ ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಲೆಕ್ಕಾಚಾರ ಹಾಕ್ತಿದ್ದಾರೆ.
ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಆರಂಭಿಸಿರುವುದು ಕೆಜಿಎಫ್ ದೃಷ್ಟಿಯಿಂದ ಪಾಸಿಟಿವ್ ಆಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಪ್ರಭಾಸ್ ಅಭಿಮಾನಿಗಳು ನಮ್ಮ ಸಿನಿಮಾ ಎಂದು ಹೆಚ್ಚು ಪ್ರಮೋಟ್ ಮಾಡಲು ಶುರು ಮಾಡಬಹುದು. ಟಾಲಿವುಡ್‌ನಲ್ಲಿ ಇದು ಕೆಜಿಎಫ್ ಯಶಸ್ಸಿಗೆ ಕಾರಣವೂ ಆಗಬಹುದು.
ಕೆಜಿಎಫ್ ಚಾಪ್ಟರ್ 2 ರಿಲೀಸ್‌ಗೆ ಸಂಬಂಧಿಸಿದಂತೆ ಪ್ರಚಾರದ ಕಾರ್ಯಕ್ರಮಗಳಲ್ಲಿ ಪ್ರಭಾಸ್ ಪಾಲ್ಗೊಳ್ಳಬಹುದು. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕೆಜಿಎಫ್ ಸಿನಿಮಾದ ಬಗ್ಗೆ ಪೋಸ್ಟ್ ಹಾಕುವುದು, ಅಪ್‌ಡೇಟ್ ನೀಡಬಹುದು. ಒಂದು ವೇಳೆ ಕೆಜಿಎಫ್‌ಗೆ ಜೊತೆಯಾಗಿ ಪ್ರಭಾಸ್ ನಿಂತರೆ ಇನ್ನು ಹೆಚ್ಚಿನ ಪ್ರಚಾರ ಸಿಗಬಹುದು.
PublicNext
15/01/2021 04:34 pm