ಮುಂಬೈ: ಬಾಲಿವುಡ್ ನಟಿ ಜಾಹ್ನವಿ ಕಪೂರ್ ತಾಯಿ ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ಅದ್ಭುತ ನೃತ್ಯಗಾರ್ತಿ. ತಾಯಿಯಂತೆ ತಾನೂ ಉತ್ತಮ ನೃತ್ಯಗಾರ್ತಿ ಎನ್ನುವುದನ್ನು ಜಾಹ್ನವಿ ಕಪೂರ್ ತೋರಿದ್ದಾರೆ.
'ಅಶೋಕ' ಚಿತ್ರದ ಸನ್ ಸನನಾ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋವನ್ನು ಜಾಹ್ನವಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಡಿಗೆ ತಕ್ಕಂತೆ ಮನೋಹರವಾಗಿ ನೃತ್ಯ ಮಾಡಿರುವ ಜಾಹ್ನವಿ, ಬೆಲ್ಲಿ ಡ್ಯಾನ್ಸ್‌ನ ತಾಂತ್ರಿಕ ಅಂಶಗಳಲ್ಲಿ ತನ್ನ ಪರಿಪೂರ್ಣತೆಯನ್ನು ಪ್ರದರ್ಶಿಸಿದ್ದಾರೆ. ಬಿಳಿ ಉಡುಪು ತೊಟ್ಟು ಜಾಹ್ನವಿ ಕಪೂರ್ ಬೆಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಲ್ಲಿ ಡ್ಯಾನ್ಸ್ ಸೆಷನ್ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಕಾಮೆಂಟ್ ಮಾಡಿರುವ ಅವರ ಚಿಕ್ಕಮ್ಮ ಮಹೀಪ್ ಕಪೂರ್, ಎಮೋಜಿಗಳನ್ನು ಹರಿಬಿಟ್ಟಿದ್ದಾರೆ. ಡಿಸೈನರ್ ಮನೀಶ್ ಮಲ್ಹೋತ್ರಾ ಸಹ "ಉಫ್" ಎಂದು ಕಾಮೆಂಟ್ ಮಾಡಿದ್ದಾರೆ.
PublicNext
13/01/2021 08:59 pm