ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿ ಎಂದರೆ ತುಂಬಾ ಪ್ರೀತಿ. ಹೀಗಾಗಿ ಶೂಟಿಂಗ್ ನಡುವೆ ಕೊಂಚ ಬಿಡುವು ಮಾಡಿಕೊಂಡು ಸಫಾರಿ ಹೋಗುತ್ತಾರೆ. ಈ ಬಾರಿ ಅವರು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಕಬಿನಿಯಲ್ಲಿ ಸ್ನೇಹಿತರ ಜೊತೆಗೆ ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತಾಡುತ್ತಿದ್ದಾರೆ.
ಸಫಾರಿ ವೇಳೆ ಹುಲಿಯೊಂದು ಕಾಣಿಸಿಕೊಂಡಿದೆ. ದರ್ಶನ್ ಹುಲಿಯ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದರ್ಶನ್ ಅವರು ಕೆಲವು ದಿನಗಳ ಹಿಂದೆ ಕಿನ್ಯಾಡಿ ಕಾಡಿಗೆ ಹೋಗಿ ಪ್ರಾಣಿ ಪಕ್ಷಿಗಳ ಫೋಟೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಇದೀಗ ನಾಗರಹೊಳೆ ಅಭಯಾರಣ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಕ್ಯಾಮೆರಾವನ್ನು ಹೆಗಲಿಗೆ ಹಾಕಿಕೊಂಡು ಪ್ರಾಣಿ ಪಕ್ಷಿಗಳ ಫೋಟೋ ತೆಗೆಯುತ್ತಾ ಸಫಾರಿಯನ್ನು ಎಂಜಾಯ್ ಮಾಡುತ್ತಿದ್ದಾರೆ.
PublicNext
12/01/2021 02:38 pm