ಕಿರುತೆರೆ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಯಶ್ ಮೊದಲು ಪೋಷಕ ಹಾಗೂ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದ ಯಶ್ ನಂತರ ನಾಯಕ ನಟನಾಗಿ ಹಂತ ಹಂತವಾಗಿ ಬೆಳೆದ ಪ್ರತಿಭೆ.
ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ನಾಯಕನಾಗಿ ಪರಿಚಯವಾದ ನಟ ಇಂದು ಒಂದು ಸಿನಿಮಾಗೆ 15 ಕೋಟಿ ಪಡೆಯುವ ರಾಕಿಂಗ್ ಸ್ಟಾರ್ ಆಗಿ ಬೆಳೆದಿದ್ದಾರೆ.
34 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟನಿಗೆ ಮಡದಿ,ಮಕ್ಕಳು ಸೇರಿದಂತೆ ಕೋಟ್ಯಾಂತರ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಕೊರೊನಾ ಸಾಂಕ್ರಾಮಿಕ ಕಾರಣದಿದಾಗಿ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿರುವ ಯಶ್ ಅವರು ಮನೆಯಲ್ಲಿ ಕುಟುಂಬಸ್ಥರೊಂದಿಗೆ ಸರಳವಾಗಿ ಆಚರಣೆ ಮಾಡಿದ್ದಾರೆ.
ಗಂಡನಿಗಾಗಿ ಕೇಕ್ ಮಾಡಿದ ರಾಧಿಕಾ ಈ ಫೋಟೋವನ್ನು ಹಂಚಿಕೊಂಡು 'ಕೆಲವೊಮ್ಮೆ ನಾನು ಯೋಚಿಸುತ್ತೇನೆ ನೀವು ಇಷ್ಟೊಂದು ಪರ್ಫೆಕ್ಟ್ ಆಗಿರಲು ಕಾರಣವೇನು ಎಂದು. ಆನಂತರ ನನಗೆ ತಿಳಿಯುತ್ತದೆ ಇದಕ್ಕೆ ಕಾರಣವೇ ನೀವು. ನಿಮ್ಮ ಪಾಲಿನ ಕೇಕ್ ಕೂಡ ನನಗೆ ಕೊಡುತ್ತೀರಾ ಹ್ಯಾಪಿ ಬರ್ತಡೇ ಬೆಸ್ಟಿ' ಎಂದು ಬರೆದುಕೊಂಡಿದ್ದಾರೆ.
PublicNext
08/01/2021 02:14 pm