ಮಹಾನಿಂಗ ಮೊದಲ ಭಾಗ ಉತ್ತರ ಕರ್ನಾಟಕದಲ್ಲಿ ತುಂಬಾ ಹೆಸರು ಮಾಡಿರುವ ಟೆಲಿಫಿಲ್ಮ್ ಆಗಿದೆ. ಈಗ ಮತ್ತೋಂದು ಸರದಿ ಮಹಾನಿಂಗ-2 ಚಿತ್ರದ ಸರದಿ.
ಧಾರವಾಡದ ಅಕ್ಕ ಪಕ್ಕದಲ್ಲೇ ಚಿತ್ರೀಕರಣ ಮಾಡಿರುವ ಈ ಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರೂ, ತಂತ್ರಜ್ಞರು ತಮ್ಮ ವೃತ್ತಿಜೀವನ ಬೇರೆಯಾದರೂ ಜೊತೆಗೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಹವ್ಯಾಸಿ ಕಲಾವಿದರಾಗಿದ್ದಾರೆ.
ಇಡೀ ಹುಬ್ಬಳ್ಳಿ-ಧಾರವಾಡದಲ್ಲಿ ಹೆಸರು ಮಾಡಿ ಜನರ ಮನಸ್ಸನ್ನು ಸೆಳೆದ ಮಹಾನಿಂಗ ಚಿತ್ರದ ಎರಡನೇ ಭಾಗವಾದ ಈ ಚಿತ್ರವನ್ನು ಇದೇ ಜನವರಿ 17 ರಂದು ಬಿಡುಗಡೆ ಮಾಡಲು ಎಚ್.ಡಿ.ರಾಕರ್ಸ್ ಚಿತ್ರತಂಡ ನಿರ್ಧರಿಸಿದೆ.
ಈ ಚಿತ್ರವು ಕೂಡ ಮೊದಲ ಭಾಗದಂತೆಯೇ ಕ್ಷಣ ಕ್ಷಣಕ್ಕೂ ಕುತೂಹಲವನ್ನು ಕೆರಳಿಸುವ ಕಥಾಹಂದರವನ್ನು ಹೊಂದಿರುವ ಹಾರರ್, ಸಸ್ಪೆನ್ಸ್ ಚಿತ್ರವಾಗಿದೆ.
ಮೊದಲ ಭಾಗವನ್ನು ನೋಡಿದರೆ ಮಾತ್ರ ಸಂಪೂರ್ಣವಾಗಿ ಅರ್ಥವಾಗುವ ಈ ಚಿತ್ರಕ್ಕಾಗಿ ಧಾರವಾಡದ ಸಿನಿ ರಸಿಕರು ತುಂಬಾ ಉತ್ಸುಕತೆಯಿಂದ ಕಾಯುತ್ತಿದ್ದಾರೆ.
ಮಹಾನಿಂಗ-2 ಸಂಪೂರ್ಣ ಚಿತ್ರವು ಮೊದಲ ಭಾಗವನ್ನು ಅವಲಂಬಿಸಿರುವುದರಿಂದ ಮೊದಲ ಭಾಗವನ್ನು ಕಡ್ಡಾಯವಾಗಿ ಹಾಗೂ ತುಂಬಾ ಗಮನ ಹರಿಸಿ ನೋಡಬೇಕು, ಚಿತ್ರದ ಮೇಲೆ ಹಾಗೂ ಚಿತ್ರತಂಡದ ಮೇಲೆ ಹಿರಿಯ ಕಲಾವಿದರ, ಹಿರಿಯ ತಂತ್ರಜ್ಞರ ಹಾಗೂ ಕಲಾ ಪ್ರೇಕ್ಷಕರ ಪ್ರೋತ್ಸಾಹ ಹಾಗೂ ಆಶೀರ್ವಾದ ನೀಡಬೇಕೆಂದು ನಾಯಕ ನಟ ಹಾಗೂ ಚಿತ್ರದ ನಿರ್ದೇಶಕ ರಾಮ್ ಪಟವರ್ಧನ್ ತಿಳಿಸಿದ್ದಾರೆ.
PublicNext
08/01/2021 11:14 am