ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಸಂಭಾವನೆ ನಟಿಯರಾದ ರಮ್ಯಾ ಹಾಗೂ ರಶ್ಮಿಕಾ ಮಂದಣ್ಣ ಅವರಿಗಿಂತ ಹೆಚ್ಚಾಯ್ತಾ ಎನ್ನುವ ಆಶ್ಚರ್ಯಕರ ಪ್ರಶ್ನೆ ಎದ್ದಿದೆ.
ಹೌದು. ವಂಚನೆ ಪ್ರಕರಣದ ಆರೋಪಿ ಯುವರಾಜ್ 1.25 ಕೋಟಿ ರೂ.ವನ್ನು ರಾಧಿಕಾ ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಟಿ ರಾಧಿಕಾ 75 ಲಕ್ಷ ರೂ. ಲೆಕ್ಕವನ್ನು ಮಾಧ್ಯಮಗಳ ಮುಂದೆ ನೀಡಿದ್ದು ಭಾರೀ ಚೆರ್ಚೆಗೆ ಕಾರಣವಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ನಟಿ ರಾಧಿಕಾ ಒಂದು ಕಾಲದಲ್ಲಿ ನಂಬರ್ 1 ನಾಯಕಿಯಾಗಿದ್ದರು. ಈಗಲೂ ತಕ್ಕ ಮಟ್ಟಿಗೆ ಬೇಡಿಕೆ ಉಳಿಸಿಕೊಂಡಿದ್ದಾರೆ. ಆದರೆ ಒಂದು ಸಿನಿಮಾಗೆ 75 ಲಕ್ಷ ರೂ. ಸಂಭಾವಣೆ ಪಡೆದಿದ್ದಾಗಿ ಹೇಳಿರುವುದು ಅವರನ್ನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಣ ಆಗುವ ಸಿನಿಮಾಗಳಲ್ಲಿ ಇಷ್ಟು ಸಂಭಾವನೆ ನೀಡುವ ಸಾಧ್ಯತೆ ತೀರಾ ಕಡಿಮೆ. ಅತೀ ಬೇಡಿಕೆ ಇದ್ದರೂ ನಟಿಯೊಬ್ಬರಿಗೆ ನಿರ್ಮಾಪಕರು 50 ಲಕ್ಷ ರೂ. ನೀಡುವುದು ವಿರಳ. ಹೀಗಿದ್ದ ಮೇಲೆ ರಾಧಿಕಾ ಅವರಿಗೆ 75 ಲಕ್ಷ ರೂ. ಸಂಭಾವನೆ ಹೇಗೆ ನೀಡಲಾಗಿದೆ ಎನ್ನುವುದು ಕುತೂಹಲ ಕಾಡುತ್ತಿದೆ.
PublicNext
07/01/2021 01:40 pm