ನವದೆಹಲಿ: ಮೈನಸ್ 33 ಡಿಗ್ರಿ ಸೆಲ್ಸಿಯಸ್ ತಾಪಾಮಾನದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಕಾಶ್ಮೀರದ ಲಡಾಖ್ ಗಡಿಯಲ್ಲಿ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಅಲ್ಲಿ ತೆಗೆದ ತಮ್ಮ ಅಪರೂಪದ ಫೋಟೊ ಹಾಕಿ ಟ್ವೀಟ್ ಮಾಡಿರುವ ಅವರು ಅಲ್ಲಿನ ಭಯಂಕರ ಚಳಿಯ ತೀವ್ರತೆಯ ಬಗ್ಗೆ ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಜಾಹೀರಾತೊಂದರ ಚಿತ್ರೀಕರಣಕ್ಕೆ ಮೈನಸ್ 33 ಡಿಗ್ರಿ ತಾಪಮಾನವಿರುವ ಲಡಾಖ್‌ಗೆ ತೆರಳಿದ್ದ 78 ವರ್ಷದ ಅಮಿತಾಬ್ ಬಚ್ಚನ್ ಅಲ್ಲಿನ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಪ್ರವಾಸಕ್ಕೆ ಸಂಬಂಧಿಸಿದಂತೆ ಚಿತ್ರವೊಂದನ್ನು ಶೇರ್ ಮಾಡಿದ್ದು, ಮಂಕಿ ಕ್ಯಾಪ್, ಚಳಿಗಾಲದ ಜಾಕೆಟ್, ಗ್ಲೌಸ್ ಮತ್ತು ಸ್ನೋ ಕನ್ನಡಕ ಧರಿಸಿರುವ ಅವರು, ‘ಲಡಾಖ್‌ಗೆ ಹೋಗಿ ಬಂದೆ ಚಳಿ ತಡೆಯಲು ಇವೆಲ್ಲ ಧರಿಸಿದ್ದರೂ ಅವುಗಳೂ ನನ್ನನ್ನು ಚಳಿಯಿಂದ ಕಾಪಾಡಲಿಲ್ಲ’ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
PublicNext
06/01/2021 06:07 pm