ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಎದುರು ನೋಡುತ್ತಿರುವ ಚಿತ್ರಪ್ರೇಮಿಗಳಿಗೆ ಹೊಂಬಾಳೆ ಫಿಲಂಸ್ ಸರ್ಪ್ರೈಸ್ ನೀಡಿದೆ. ಜನವರಿ 8 ರಂದು ನಟ ಯಶ್ ಅವರ ಹುಟ್ಟುಹಬ್ಬವಿದೆ. ಈ ವಿಶೇದ ದಿನ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಯಶ್ ಬರ್ತಡೇಗಾಗಿ ಅತಿ ದೊಡ್ಡ ಅಭಿಮಾನಿ ಬಳಗ ಕಾಯುತ್ತಿದೆ. ಇಂತಹ ಸಮಯದಲ್ಲಿ ಯಾರೂ ನಿರೀಕ್ಷೆ ಮಾಡದಂತಹ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ ನಿರ್ಮಾಪಕರು.
ಹೊಂಬಾಳೆ ಫಿಲಂಸ್ ವತಿಯಿಂದ 'ಕೆಜಿಎಫ್ ಟೈಮ್ಸ್' ಎಂಬ ಹೆಸರಿನಲ್ಲಿ ವಿಶೇಷ ಪತ್ರಿಕೆಯೊಂದು ಮೂಡಿ ಬರುತ್ತಿದೆ ಎಂಬ ವಿಚಾರ ಹೊರಬಿದ್ದಿದೆ. ಕೆಜಿಎಫ್ ಸಿನಿಮಾದ ಅನುಭವ, ಕಥೆ, ಪಾತ್ರಗಳು ಹಾಗೂ ಇನ್ನಿತರ ವಿಷಯಗಳು ಇದರಲ್ಲಿ ಸಿಗಬಹುದು. ಖುದ್ದು ಹೊಂಬಾಳೆ ಸಂಸ್ಥೆಯ ಪತ್ರಿಕೆಯ ಮುಖಪುಟವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ.
ಇದು ಕೆಜಿಎಫ್ ಸಿನಿಮಾದ ವಿಶೇಷ ಸಂಚಿಕೆಯಾಗಿದ್ದು, ಜನವರಿ 4 ರಿಂದ ಆರಂಭವಾಗಲಿದೆ. (ಕೆಜಿಎಫ್ ಟೈಮ್ಸ್ ಬಗ್ಗೆ ಪೂರ್ತಿ ವಿವರ ಲಭ್ಯವಾಗಿಲ್ಲ) ಕೆಜಿಎಫ್ ಸಿನಿಮಾ ವಿಚಾರದಲ್ಲಿ ನಿರ್ಮಾಪಕರು ಮಾಡುತ್ತಿರುವ ಪ್ರಚಾರದ ವಿಧಾನಕ್ಕೆ ಇಡೀ ಚಿತ್ರರಂಗ ಅಚ್ಚರಿ ಮತ್ತು ಕುತೂಹಲದಿಂದ ನೋಡುತ್ತಿದೆ.
PublicNext
04/01/2021 07:01 pm