ಮುಂಬೈ: ಸಂಪಿಗೆ ಮೂಗಿನ ಸುಂದರಿ ದೀಪಿಕಾ ಅವರು ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಆ್ಯಕ್ಟಿವ್ ಆಗಿ ಇರ್ತಾರೆ. ಆದ್ರೆ ನಿನ್ನೆಯಷ್ಟೇ ದೀಪಿಕಾ ತಾವು ಹಾಕಿದ ಎಲ್ಲ ಪೋಸ್ಟ್ ಗಳನ್ನು ಇದ್ದಕ್ಕಿದ್ದಂತೆ ಡಿಲಿಟ್ ಮಾಡಿದ್ದಾರೆ.
ಹೊಸ ವರ್ಷದ ಮೊದಲ ದಿನವೇ ದೀಪಿಕಾ ಹೀಗೇಕೆ ಮಾಡಿದ್ರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಟ್ವಿಟ್ಟರ್ ನಲ್ಲಿ 68 ಜನರನ್ನು ಫಾಲೋ ಮಾಡುತ್ತಿರುವ ದೀಪಿಕಾ ಪಡುಕೋಣೆ ಅವರನ್ನು 2 ಕೋಟಿ 77 ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ.
ಅದರಂತೆ ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ 128 ಜನರನ್ನು ಫಾಲೋ ಮಾಡುತ್ತಿರುವ ದೀಪಿಕಾಗೆ 5.25 ಕೋಟಿ ಮಂದಿ ಫಾಲೋ ಮಾಡ್ತಿದ್ದಾರೆ. ಆದ್ರೆ ಇದ್ದಕ್ಕಿಂದ್ದಂತೆ ತಮ್ಮ ಎಲ್ಲ ಪೋಸ್ಟ್ ಗಳನ್ನು ದೀಪಿಕಾ ಡಿಲಿಟ್ ಮಾಡಿದ್ದು ಅಭಿಮಾನಿಗಳಲಿ ಅಚ್ಚರಿ ಮೂಡಿಸಿದೆ.
PublicNext
02/01/2021 08:10 am