ಕೋವಿಡ್ ಗೆ ಚಿಕಿತ್ಸೆ ಪಡೆದು ಮರಳಿದ ನಂತರ ಮಿಲ್ಕಿ ಬ್ಯೂಟಿ ತಮನ್ನಾ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತಮನ್ನಾ ಕೋವಿಡ್ ಲಾಕ್ ಡೌನ್ ವೇಳೆ ಸಾಕಷ್ಟು ಹೊಸ ಕೆಲಗಳನ್ನು ಕಲಿತಿದ್ದಾರೆ.
ಹೌದು, ಅಡುಗಡೆ ಮಾಡುವುದು. ಹೊಸ ಭಾಷೆ ಕಲಿಯುವುದು ಹೀಗೆ ನಾನಾ ರೀತಿಯ ಚಟುವಟಿಕೆಗಳನ್ನು ಮಾಡುತ್ತಾ ಕಾಲ ಕಳೆದಿದ್ದರು.
ಈಗ ಇದೇ ತಮನ್ನಾ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ.
ಹೌದು, ಗೋಪಿಚಂದ್ ಜೊತೆ ಸೀಟಿ ಮಾರ್ ಸಿನಿಮಾದಲ್ಲಿ ನಟಿಸುತ್ತಿರುವ ತಮನ್ನಾ ಸಿನಿಮಾ ಚಿತ್ರೀಕರಣದ ಸೆಟ್ ನಲ್ಲಿ
ಮಿನಿ ಬಸ್ ಓಡಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಸದ್ಯ ವಿಡಿಯೋವನ್ನು ನಟಿ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ನೋಡಿದವರು ಹುಬ್ಬೇರಿಸುತ್ತಿದ್ದಾರೆ. ಜೊತೆಗೆ ಕಮೆಂಟ್ ಮಾಡುತ್ತಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
PublicNext
31/12/2020 05:01 pm