ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ರೆಸಾರ್ಟ್ ನಲ್ಲಿ ನಟ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ತನ್ನ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿಹಾರಿಕಾ ಹಾಗೂ ಅಕ್ಷಯ್ ವಿವಾಹ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು.
ಕೊರೊನಾ ಕಾರಣದಿಂದ ಆತ್ಮೀಯರಿಗಷ್ಟೇ ಆಹ್ವಾನ ನೀಡಲಾಗಿತ್ತು.
ನಿಹಾರಿಕಾ ಹಾಗೂ ಅಕ್ಷಯ್ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಜನವರಿ 16ರಂದು ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದು ಚಿತ್ರರಂಗದ ಗಣ್ಯರಿಗೆ ಆಹ್ವಾನಿಸಲಾಗಿದೆ.
PublicNext
28/12/2020 06:23 pm