ಕೊಚ್ಚಿನ್: ಖ್ಯಾತ ಮಲೆಯಾಳಂ ನಟ ಅನಿಲ್ ನೆಡುಮಂಗಾಡ್ (48) ತೊಡುಪುಳ ಮಾಲಂಕಾರ ಡ್ಯಾಮ್ ನಲ್ಲಿ ಈಜುವಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇಂದು ಸಂಜೆ ನಟ ಮತ್ತು ಇತರ ಇಬ್ಬರು ಸ್ನಾನಕ್ಕಾಗಿ ಡ್ಯಾಮ್ ಗೆ ಹೋದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಅವರು ತೊಡುಪುಳದಲ್ಲಿದ್ದರೆಂದು ಮಾಹಿತಿ ತಿಳಿಸಿದೆ.
“ಪ್ರಾಥಮಿಕ ವಿಚಾರಣೆಯ ಪ್ರಕಾರ, ನಟ ಮತ್ತು ಅವರ ಸ್ನೇಹಿತರು ಶೂಟಿಂಗ್ ವಿರಾಮದ ಸಮಯದಲ್ಲಿ ಸ್ನಾನ ಮಾಡಲು ಡ್ಯಾಮ್ ಗೆ ಹೋಗಿದ್ದಾರೆ. ಅವರು ಆಳವಾದ ನೀರಿಗೆ ಇಳಿದಾಗ ನೀರಿನ ಸೆಳವು ಅವರನ್ನು ಎಳೆದೊಯ್ದಿದೆ” ಎಂದು ಇಡುಕ್ಕಿ ವಿಶೇಷ ಶಾಖೆಯ ಅಧಿಕಾರಿಯೊಬ್ಬರು ಹೇಳಿದರು. ತಕ್ಷಣ ಅನಿಲ್ ಅವರನ್ನು ನೀರಿನಿಂದ ರಕ್ಷಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸರು ನೆಡುಮಂಗಾಡ್ ಅವರ ಶವವನ್ನು ತೋಡುಪುಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
PublicNext
26/12/2020 03:33 pm