ಪ್ರೇಮ ಬರಹ ಚಿತ್ರ ಖ್ಯಾತಿಯ ನಟ ಚಂದನ್ ಮತ್ತು ಟೆಕ್ನಿಷನ್ ಗಳ ನಡುವೆ ನಡೆದ ಚಟಾಪಟಿಯ ವೀಡಿಯೋ ವೈರಲ್ ಆಗಿದೆ. ಇದೇ ವೇಳೆ ನಟ ಚಂದನ್ ಗೆ ಟೆಕ್ನಿಷನ್ ಒಬ್ಬ ಕಪಾಳಕ್ಕೂ ಹೊಡೆದಿದ್ದಾನೆ.
ಕನ್ನಡದ ನಟ ಚಂದನ್ ಸೀರಿಯಲ್ ನಲ್ಲೂ ಗುರುತಿಸಿಕೊಂಡ ನಾಯಕ ನಟ. ಕನ್ನಡದ ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲೂ ಹೆಸರು ಮಾಡಿರೋ ಚಂದನ್, ತೆಲುಗು ಸಾವಿತ್ರಮ್ಮ ಗಾರು ಅಬ್ಬಾಯಿ ಸೀರಿಯಲ್ ನಲ್ಲೂ ಅಭಿಸಿದ್ದಾರೆ.
ಹೈದ್ರಾಬಾದ್ ನಲ್ಲಿ ಇದೇ ಸೀರಿಯಲ್ ಚಿತ್ರದ ಸಮಯದಲ್ಲಿಯೇ ಚಂದನ್ ಕ್ಯಾಮರಾ ಸಹಾಯಕನಿಗೆ ಹೊಡೆದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಟೆಕ್ನಿಷಯನ್ ಗಳು ಒಟ್ಟಿಗೆ ಸೇರಿ ಚಂದನ್ ನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗಲೇ ಈ ಗುಂಪಿನಲ್ಲಿದ್ದವ ಚಂದನ್ ಕಪಾಳಕ್ಕೆ ಹೊಡೆದೆ ಬಿಟ್ಟಿದ್ದಾನೆ. ಇಷ್ಟೆಲ್ಲ ಆದ್ಮಲೇ ಚಂದನ್ ಕೈ ಮುಗಿದು ಕ್ಷಮೇ ಕೇಳಿದ್ದಾರೆ. ಅಂದ್ಹಾಗೆ ಈ ಘಟನೆ ನಡೆದು ಹೆಚ್ಚು ಕಡಿಮೆ ಒಂದು ತಿಂಗಳೇ ಆಗಿದೆ. ಆದರೆ ಅಂದಿನ ಈ ವೀಡಿಯೋ ಈಗ ವೈರಲ್ ಆಗಿದೆ.
-ರೇವನ್ ಪಿ.ಜೇವೂರ್, ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸಟ್
PublicNext
01/08/2022 09:42 am